Friday, October 25, 2013

ಕಟೀಲಿನಲ್ಲಿ ಕಲಾಪರ್ವ

ಮಕ್ಕಳಲ್ಲಿ ಸಂಸ್ಕಾರದ ನಿರ್ಮಾಣ -ಅಜಿತ್ ಕುಮಾರ ಹೆಗ್ಡೆ
ಕಟೀಲು : ಯಕ್ಷಗಾನ ಪ್ರದರ್ಶನಗಳಿಗೆ ಹೋದರೆ ಅಲ್ಲಿ ವಯೋವೃದ್ಧರೇ ಕಾಣುತ್ತಾರೆ. ಯುವಕರ ಸಂಖ್ಯೆ ಕಡಿಮೆ ಕಾಣುತ್ತದೆ. ಮೊಬೈಲು, ಫೇಸುಬುಕ್ಕುಗಳಲ್ಲಿ ಮುಳುಗಿ ಹಾದಿತಪ್ಪುತ್ತಿರುವ ಮಕ್ಕಳಲ್ಲಿ ಯಕ್ಷಗಾನಾಸಕ್ತಿಯನ್ನು ಬೆಳೆಸಿದರೆ ಕಲಾವಿದರ ಜೊತೆಗೆ ಪ್ರೇಕ್ಷಕರ ಸಂಖ್ಯೆಯನ್ನೂ ಹೆಚ್ಚಿಸಿದಂತಾಗುತ್ತದೆ. ಅವರಲ್ಲಿ ಸಂಸ್ಕಾರವನ್ನು ನಿರ್ಮಿಸಿದಂತಾಗುತ್ತದೆ. ಕಟೀಳಿನ ದುರ್ಗಾ ಮಕ್ಕಳದ್ದು ಸೇರಿದಂತೆ ಜಿಲ್ಲೆಯಲ್ಲಿ ಅನೇಕ ಮಕ್ಕಳ ಯಕ್ಷಗಾನ ಮೇಳಗಳು ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಿರುವುದು ಸಮಾಧಾನಕರ ಎಂದು ಮಂಗಳೂರು ಮಹಾನಗರ ಪಾಳಿಕೆ ಆಯುಕ್ತ, ಕಟೀಲು ದೇಗುಲದ ಆಡಳಿತಾಧಿಕಾಇರ ಶಾನಾಡಿ ಅಜಿತ್ ಕುಮಾರ ಹೆಗ್ಡೆ ಹೇಳಿದರು.
ಅವರು ಭಾನುವಾರ ರಾತ್ರಿ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಐದನೆ ವರ್ಷದ ಕಲಾಪರ್ವದಲ್ಲಿ ಮಾತನಾಡಿದರು.
ಮುಂಬೈನ ಜ್ಯೋತಿಷಿ ಪೆರ್ಣಂಕಿಲ ಹರಿದಾಸ ಭಟ್ ಮಾತನಾಡಿ ರಾಮ ರಾವಣವನ್ನು ಕೊಂದರೆ, ಕೃಷ್ಣ ಕಂಸನನ್ನು, ದುರ್ಗಾಸುರನನ್ನು ದುರ್ಗೆ, ಮಹಿಷಾಸುರನ್ನು ಮಹಿಷಮರ್ಧಿನಿ, ರಕ್ತಬೀಜನನ್ನು ರಕ್ತೇಶ್ವರೀ, ಗಾಂಧಿಯನ್ನು ಗೋಡ್ಸೆ, ಒಸಾಮಾನನ್ನು ಒಬಾಮಾ ಹೀಗೆ ಆಯಾಯ ಅಕ್ಷರದವರೇ ಶತ್ರುಗಳಾಗಿರುವ ವಿಚಾರಗಳನ್ನು ಅಧ್ಯಯನದಿಂದ ಗಮನಿಸಬಹುದು. ಶುದ್ಧ ಕನ್ನಡವನ್ನು ಯಕ್ಷಗಾನದಿಂದ ಮಾತಾಡಬಹುದು ಎಂದು ಹೇಳಿದರು.
ಕಲಾವಿದ ಮಂಜೇಶ್ವರ ಜನಾರ್ದನ ಜೋಗಿಯವರನ್ನು ಹತ್ತು ಸಾವಿರ ರೂ.. ನಗದು ಸಹಿತ ಸಂಮಾನಿಸಲಾಯಿತು. ಯಕ್ಷಗಾನೀಯ ಶೈಲಿಯಲ್ಲಿ ಬಲಿಪ ಶಿವಶಂಕರ ಭಟ್ ಸಂಮಾನಪತ್ರ ವಾಚಿಸಿದರು.
ಪ್ರಸಂಗಕರ್ತ ಶ್ರೀಧರ ಡಿ.ಎಸ್. ಮತ್ತು ಯಕ್ಷಗಾನ ವಿಮರ್ಶಕ ಕೆ.ಎಲ್.ಕುಂಡಂತಾಯರನ್ನು ಗೌರವಿಸಲಾಯಿತು. ಇದೇ ಸಂದರ್ಭ ಯಕ್ಷಗಾನ ಶಿಕ್ಷಣ ಪಡೆದ ವಿದ್ಯಾರ್ಥೀಗಳಿಗೆ ಪ್ರಮಾಣಪತ್ರ ವಿತರಣೆ, ಯಕ್ಷಗಾನ ಪ್ರತಿಭಾ ಪುರಸ್ಕಾರ, ಗುರುವಂದನೆ ನಡೆಯಿತು.
ಸಚಿವ ಅಭಯಚಂದ್ರ ಜೈನ್, ಸೂರ್‍ಯನಾರಾಯಣ ಉಪಾಧ್ಯಾಯ, ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಅಜಿತ್ ಕುಮಾರ ಹೆಗ್ಡೆ, ಡಾ.ಪದ್ಮನಾಭ ಕಾಮತ್, ಅಜಿತ್ ಕುಮಾರ ಹೆಗ್ಡೆ, ಬಿ.ಟಿ.ಬಂಗೇರ, ತಲ್ಲೂರು ಶಿವರಾಮ ಶೆಟ್ಟಿ, ಮರವೂರು ಜಗದೀಶ ಶೆಟ್ಟಿ, ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಅಶೋಕ ಶೆಟ್ಟಿ, ಗಣೇಶ ಶೆಟ್ಟಿ, ಲೀಲಯ್ಯ ಶೆಟ್ಟಿಗಾರ, ಲೀಲಾಕ್ಷ ಕರ್ಕೇರ ಮತ್ತಿತರರಿದ್ದರು.
ಮಕ್ಕಳ ಮೇಳದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ವಾಸುದೇವ ಶೆಣೈ ಕಾರ್‍ಯಕ್ರಮ ನಿರೂಪಿಸಿದರು. ಪಶುಪತಿ ಶಾಸ್ತ್ರಿ ವಂದಿಸಿದರು. ಶ್ರೀ ದುರ್ಗ ಮಕ್ಕಳ ಮೇಳದವರಿಂದ ನೂರನೇ ಪ್ರದರ್ಶನವಾದ ರಾಮಲಕ್ಷ್ಮಣರ ಒಡ್ಡೋಲಗ ಸಹಿತವಾದ ಪಂಚವಟಿ ಪ್ರದರ್ಶನಗೊಂಡಿತು.

ಅಂಬರೀಷ್ ಭೇಟಿ

ಕಟೀಲು ಶ್ರೀ ದುಗಾಱಪರಮೆಶ್ವರೀ ದೇವಸ್ಥಾನಕ್ಕೆ ನಟ, ಸಚಿವ ಅಂಬರೀಷ್ ಭೇಟಿ ಕೊಟ್ಟ ಸಂದರ್ಭ ಅರ್ಚಕರಾದ ವಾಸುದೇವ ಆಸ್ರಣ್ಣ, ಹರಿ ಆಸ್ರಣ್ಣ, ಆಡಳಿತಾಧಿಕಾರಿ ಅಜಿತ್ ಕುಮಾರ್ ಹೆಗ್ಡೆ ಇದ್ದರು

Monday, October 7, 2013

katil temple navaratri





ನವರಾತ್ರಿ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ



ನವರಾತ್ರಿ ಪ್ರಯುಕ್ತ ನೃತ್ಯ ವೈವಿಧ್ಯ, ಹರಿಕಥೆ ನಡೆದವು.

Thursday, September 26, 2013

ಕಟೀಲಿನಲ್ಲಿ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್

ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಪ್ರಯುಕ್ತ ಕಟೀಲು ದೇವಸ್ಥಾನ ಹಾಗೂ ದ.ಕ.ಜಿಲ್ಲಾ ಬಾಲ್ ಬ್ಯಾಡ್‌ಮಿಂಟನ್ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ನಡೆದ
ರಾಜ್ಯ ಮಟ್ಟದ ಸಬ್ ಜೂನಿಯರ್ ಬಾಲ್ ಬ್ಯಾಡ್‌ಮಿಂಟನ್ ಲೀಗ್ ಚಾಂಪಿಯನ್‌ಶಿಪ್ ಪಂದ್ಯಕೂಟದಲ್ಲಿ ಬಾಲಕರ ಹಾಗೂ ಬಾಲಕಿಯರ ಎರಡೂ ವಿಭಾಗದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ತಂಡಗಳು ವಿಜೇತರಾಗಿ ಪ್ರಥಮ ಪ್ರಶಸ್ತಿ ಪಡೆದವು.
ಉಳಿದಂತೆ ಬಾಲಕರ ವಿಭಾಗದಲ್ಲಿ ಜಯ ಸ್ಪೋರ್ಟ್ಸ್ ಬೆಂಗಳೂರು, ಶರಣಾಂಬ ಪ್ರೌಢಶಾಲೆ ಹೊನ್ನುಡಿಕೆ ತುಮಕೂರು ಹಾಗೂ ಮೂಡುಗಿಳಿಯಾರು ಕೋಟ ತಂಡಗಳು ಅನಂತರದ ಸ್ಥಾನ ಪಡೆದವು.
ಬಾಲಕಿಯರ ವಿಭಾಗದಲ್ಲಿ ತುಮಕೂರಿನ ಎಸ್‌ಬಿಬಿಸಿ, ಪಾಂಡವಪುರ ತಂಡಗಳು ದ್ವಿತೀಯ, ತೃತೀಯ ಸ್ಥಾನ ಪಡೆದವು.
ಮೂಡುಬಿದ್ರೆಯ ಲಾವಣ್ಯ ಹಾಗೂ ನಿಶಾಂತ್ ವೈಯಕ್ತಿಕ ಪ್ರಶಸ್ತಿ ಪಡೆದರು. ಇದೇ ಸಂದರ್ಭ ಉತ್ತಮ ಸಾಧನೆಗೈದ ಆಟಗಾರರನ್ನು ಗುರುತಿಸಿ ರಾಷ್ಟ್ರಮಟ್ಟದ ಬಾಲ್‌ಬ್ಯಾಡ್‌ಮಿಂಟನ್‌ಗೆ ರಾಜ್ಯತಂಡವನ್ನು ಆಯ್ಕೆಗೊಳಿಸುವ ತರಬೇತಿಗೆ ಆರಿಸಲಾಯಿತು.
ಉತ್ತಮ ಸಾಧನೆಗೈದ ಮೂಡುಗಿಳಿಯಾರಿನ ಚಿತ್ರಾ, ಸುರೇಖಾ, ಜಯ ಸ್ಪೋರ್ಟ್ಸ್‌ನ ಪಲ್ಲವಿ, ಹೊನ್ನುಡಿಕೆಯ ಕಾವ್ಯ, ಆಳ್ವಾಸ್‌ನ ಕಾವ್ಯ, ಕಟೀಲಿನ ಹರ್ಷಿತ್, ಕಾರ್ತಿಕ್, ತುಮಕೂರಿನ ಪವನ್, ಪಾಂಡವಪುರದ ಶರತ್, ಪ್ರಜ್ವಲ್‌ರಿಗೆ ನಗದು ಬಹುಮಾನ ನೀಡಲಾಯಿತು.
ಸಾಂಸದ ನಳಿನ್ ಕುಮಾರ್, ಜಿ.ಪಂ.ಸದಸ್ಯ ಈಶ್ವರ್, ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಪ್ರೌಢಶಾಲೆಯ ಉಪಪ್ರಾಚಾರ‍್ಯ ಸುರೇಶ್ ಭಟ್, ಹಳೆ ವಿದ್ಯಾರ್ಥಿ ಸಂಘದ ಹರಿನಾರಾಯಣದಾಸ ಆಸ್ರಣ್ಣ, ಧನಂಜಯ ಶೆಟ್ಟಿಗಾರ್, ಕರ್ನಾಟಕ ಬಾಲ್ ಬ್ಯಾಡ್‌ಮಿಂಟನ್ ಸಂಸ್ಥೆಯ ದಿನೇಶ್, ಮರವೂರುಬೀಡು ಬಾಬು ಶೆಟ್ಟಿ, ಶಿವಣ್ಣ, ಪ್ರವೀಣ್ ಕುಮಾರ್ ಮುಂತಾದವರಿದ್ದರು.
ಶನಿವಾರ ಸಚಿವ ಅಭಯಚಂದ್ರ, ಕಟೀಲು ದೇಗುಲದ ಆಡಳಿತಾಧಿಕಾರಿ ಅಜಿತ್ ಕುಮಾರ ಹೆಗ್ಡೆ, ಸಂಜೀವಿನಿ ಚಾರಿಟೇಬಲ್ ಟ್ರಸ್ಟ್‌ನ ಡಾ| ಸುರೇಶ್ ರಾವ್, ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಮಾಲಾಡಿ ಬಾಲಕೃಷ್ಣ ಶೆಟ್ಟಿ, ಪ್ರವೀಣ್ ಕುಮಾರ್, ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ವಿಜೇತ ಮಹಾದೇವ, ಉದ್ಯಮಿಗಳಾದ ಯಾದವಕೋಟ್ಯಾನ್, ಗಿರೀಶ್ ಶೆಟ್ಟಿ, ಸಂತೋಷ್ ಕುಮಾರ್ ಹೆಗ್ಡೆ, ಸಂದೀಪ್ ಶೆಟ್ಟಿ, ರಾಜ್ಯ ಬಾಲ್ ಬ್ಯಾಡ್ ಮಿಂಟನ್ ಅಧ್ಯಕ್ಷ ಪ್ರಕಾಶ್ ಹೆಬ್ಬಾಳ, ಪ್ರಧಾನ ಕಾರ್ಯದರ್ಶಿ ರಾಜರಾವ್, ಕಾರ್ಯದರ್ಶಿ ದಿನೇಶ್, ಕೋಶಾಧಿಕಾರಿ , ದ.ಕ. ಬಾಲ್ ಬ್ಯಾಡ್ ಮಿಂಟನ್ ಅಧ್ಯಕ್ಷ ಮಹಮ್ಮದ್ ಇಲ್ಯಾಸ್, ಮತ್ತಿತರರ ಉಪಸ್ಥಿತಿಯಲ್ಲಿ ಪಂದ್ಯಕೂಟ ಉದ್ಘಾಟನೆಗೊಂಡಿತ್ತು. ರಾಜ್ಯದ ವಿವಿಧ ಶಾಲೆಗಳ ಬಾಲಕರ, ಬಾಲಕಿಯರ ೪೫ ತಂಡಗಳು ಭಾಗವಹಿಸಿದ್ದವು.

ದ.ಕ. ಜಿಲ್ಲಾ ಮಟ್ಟದ ಬಾಲ್ ಬ್ಯಾಡ್‌ಮಿಂಟನ್ : ಕಟೀಲು ಹಿ. ಪ್ರಾ. ಶಾಲೆಗೆ ಪ್ರಶಸ್ತಿ


ಮಂಗಳೂರು ಶಕ್ತ್ತಿನಗರದಲ್ಲಿ ನಡೆದ ದ.ಕ.ಜಿಲ್ಲಾ ಮಟ್ಟದ ಬಾಲ್ ಬ್ಯಾಡ್‌ಮಿಂಟನ್ ೧೪ರ ವಯೋಮಿತಿಯ ಪಂದ್ಯಕೂಟದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರ ತಂಡ ಪ್ರಥಮ, ಬಾಲಕಿಯರ ತಂಡ ದ್ವಿತೀಯ ಪ್ರಶಸ್ತಿ ಪಡೆದಿದೆ. ವಿದ್ಯಾರ್ಥಿಗಳೊಂದಿಗೆ ಮುಖ್ಯ ಶಿಕ್ಷಕಿ ಮಾಲತಿ ಹಾಗೂ ದೈಹಿಕ ಶಿಕ್ಷಕ ಕೃಷ್ಣ

Sunday, August 25, 2013

ಕಟೀಲು: ಚಿನ್ನದ ರಥಕ್ಕೆ ಸ್ವರ್ಣ ಮುಹೂರ್ತ, ಕುದ್ರು ಅಭಿವೃದ್ಧಿಗೆ ಚಾಲನೆ


ಕಟೀಲು : ಪುರಾಣ ಪ್ರಸಿದ್ಧ ಕಟೀಲು ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಚಿನ್ನದ ರಥಕ್ಕೆ ಸ್ವರ್ಣಮುಹೂರ್ತವನ್ನು ಸಚಿವ ರಮಾನಾಥ ರೈ ನೆರವೇರಿಸಿದರು.
ರಾಜ್ಯದಲ್ಲೇ ಎತ್ತರವಾದ ಚಿನ್ನದ ರಥಕ್ಕೆ ೧೨ಕೆ.ಜಿ.ಚಿನ್ನ ೨೦೦ಕೆ.ಜಿ.ಬೆಳ್ಳಿ ಬಳಕೆಯಾಗಲಿದ್ದು, ರಥ ನಿರ್ಮಾಣ ಮಾಡಲಿರುವ ಉಡುಪಿಯ ಸ್ವರ್ಣ ಜ್ಯುವೆಲ್ಲರ‍್ಸ್‌ನ ಗುಜ್ಜಾಡಿ ರಾಮದಾಸ ನಾಯಕ್‌ರಿಗೆ ಸಾಂಕೇತಿಕವಾಗಿ ಚಿನ್ನವನ್ನು ಹಸ್ತಾಂತರಿಸಲಾಯಿತು. ಸರಕಾರದ ಹೊಸ ನಿಯಮದಂತೆ ಚಿನ್ನದ ಗುಣಮಟ್ಟವನ್ನು ಎನ್‌ಐಟಿಕೆ ತಜ್ಞರು ಪರೀಕ್ಷಿಸಲಿದ್ದು, ಈ ಪರೀಕ್ಷೆಗೊಳಪಡುವ ಮೊದಲ ಸಂಸ್ಥೆ ಸ್ವರ್ಣ ಜ್ಯುವೆಲ್ಲರ‍್ಸ್ ಆಗಲಿದೆ. ಮುಂದಿನ ಎಪ್ರಿಲ್ ಜಾತ್ರೆಯ ಸಂದರ್ಭ ಚಿನ್ನದ ರಥ ಸಮರ್ಪಣೆ ನಡೆಯುವ ಸಾಧ್ಯತೆಯಿದೆ.
ಕಟೀಲು ಭ್ರಾಮರಿಯ ಮೂಲಸ್ಥಾನ ಕುದ್ರುವಿನಲ್ಲಿ ಅಭಿವೃದ್ಧಿ ಕಾರ‍್ಯಗಳು ಐದು ಕೋಟಿ ರೂ.ನಲ್ಲಿ ನಡೆಯಲಿದ್ದು, ತೀರ್ಥಬಾವಿ, ಕೆರೆ ಮುಂತಾದ ಕಾಮಗಾರಿಗಳನ್ನು ಸಚಿವ ವಿನಯ ಕುಮಾರ ಸೊರಕೆ ಉದ್ಘಾಟಿಸಿದರು.
ದೇಗುಲದ ಕಚೇರಿ ಕಾಗದ ರಹಿತವಾಗಿದ್ದು ನವೀಕೃತ ಕಚೇರಿ ಹಾಗೂ ಕಂಪ್ಯೂಟರ್ ವ್ಯವಸ್ಥೆಯನ್ನು ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ಡಾ.ಸುರೇಶ್ ರಾವ್ ಕಟೀಲು ದೇವಸ್ಥಾನದಿಂದ ಆಸ್ಪತ್ರೆಯೊಂದನ್ನು ನಿರ್ಮಿಸಲು ಮುಂದಾಗಿದ್ದು, ಅದಕ್ಕೆ ಪೂರಕವಾದ ಸಹಕಾರವನ್ನು ಆರೋಗ್ಯ ಇಲಾಖೆಯಿಂದ ಮಾಡಿಕೊಡುವ ಭರವಸೆಯನ್ನು ಖಾದರ್ ನೀಡಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಡಿ.ವಿ.ಸದಾನಂದ ಗೌಡ, ಸಚಿವ ಅಭಯಚಂದ್ರ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ವೆಂಕಟರಮಣ ಆಸ್ರಣ್ಣ, ಶಾಸಕ ಮೊಯ್ದಿನ್ ಬಾವಾ, ಮೋನಪ್ಪ ಭಂಡಾರಿ, ಬೆಂಗಳೂರಿನ ದಯಾನಂದ ರೆಡ್ಡಿ, ಉದ್ಯಮಿ ಐಕಳ ಹರೀಶ್ ಶೆಟ್ಟಿ, ಸಂಜೀವನಿ ಟ್ರಸ್ಟ್‌ನ ಸಂಜೀವ ರಾವ್, ದಾನಿ ಸತೀಶ್ ಶೆಟ್ಟಿ, ತಾ.ಪಂ.ಸದಸ್ಯೆ ಬೇಬಿ ಕೋಟ್ಯಾನ್, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಕಿಲೆಂಜೂರು, ವಾಸ್ತುತಜ್ಞ ಸುಬ್ರಹ್ಮಣ್ಯ ಭಟ್ ಮುಂತಾದವರಿದ್ದರು. ಆಡಳಿತಾಧಿಕಾರಿ ಅಜಿತ್ ಕುಮಾರ ಹೆಗ್ಡೆ ಸ್ವಾಗತಿಸಿದರು. ಅರ್ಚಕ ಅನಂತಪದ್ಮನಾಭ ಆಸ್ರಣ್ಣ ವಂದಿಸಿದರು. ಪ್ರಾಚಾರ‍್ಯ ಬಾಲಕೃಷ್ಣ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.

* ರಾಜ್ಯದಲ್ಲೇ ಅತಿ ಎತ್ತರದ ಚಿನ್ನದ ರಥ
* ರಾಜ್ಯದ ಮುಜರಾಯಿ ದೇಗುಲಗಳಲ್ಲಿ ಕಾಗದ ರಹಿತ ಕಚೇರಿ ಹೊಂದಿದ ಮೊದಲ ದೇಗುಲ ಕಟೀಲು
* ಕಟೀಲು ದೇಗುಲದಿಂದ ಆಸ್ಪತ್ರೆಯ ಕನಸು
* ಕಟೀಲಿನಲ್ಲಿ ಆಕರ್ಷಣೆಯ ಕೇಂದ್ರವಾಗಲಿರುವ ಕುದ್ರು


Friday, August 16, 2013

ಶಿಬರೂರು ಹಯಗ್ರೀವ ತಂತ್ರಿ ನಿಧನ


ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೆಶ್ವರೀ ದೇಗುಲದ ತಂತ್ರಿಗಳಾದ ಶಿಬರೂರು ಹಯಗ್ರೀವ ತಂತ್ರಿ(೮೫ವ.) ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು.
ಕಟೀಲು ದೇಗುಲದಲ್ಲಿ ತಂತ್ರಿಗಳಾಗಿ ನಾಲ್ಕು ಬ್ರಹ್ಮಕಲಶಗಳನ್ನು ನೆರವೇರಿಸಿರುವ ಹಯಗ್ರೀವ ತಂತ್ರಿಯವರು ಶಿಮಂತೂರು, ಏಳಿಂಜೆ, ಕಲ್ಲಮುಂಡ್ಕೂರು, ಮಂಗಳೂರು ವೀರಭದ್ರ, ಹೊಯ್ಗೆಗುಡ್ಡೆ, ದೇಂದಡ್ಕ ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ದೇಗುಲಗಳ, ಹತ್ತಾರು ದೈವಸ್ಥಾನಗಳ ತಂತ್ರಿಗಳಾಗಿ ಕಾರ‍್ಯನಿರ್ವಹಿಸುತ್ತಿದ್ದರು. ಪೇಜಾವರ ವಿಶ್ವೇಶತೀರ್ಥರಲ್ಲಿ ಸುಧಾ ಮಂಗಳ ಪಾಠ ಹೇಳಿಸಿಕೊಂಡ ಪ್ರಥಮ ಶಿಷ್ಯರಾಗಿದ್ದು,  ತಂತ್ರಿ ವರ್ಗದಲ್ಲಿ ಇವರಷ್ಟು ಚಂಡಿಕಾಹೋಮವನ್ನು ಮಾಡಿದವರು ಬೇರೆ ಯಾರೂ ಇದ್ದಂತಿಲ್ಲ. ಪುರೋಹಿತವರ್ಗದಲ್ಲಿ ಬಹುದೊಡ್ಡ ಹೆಸರನ್ನು ಮಾಡಿದ್ದ ಇವರು ಮನೆಯನ್ನೇ ಗುರುಕುಲವನ್ನಾಗಿಸಿ, ಹತ್ತಾರು ಶಿಷ್ಯರಿಗೆ ಪಾಠ ಹೇಳಿದವರು. ಹಯಗ್ರೀವ ತಂತ್ರಿಯವರು ಪಲಿಮಾರು ಮಠದ ಈಗಿನ ಯತಿಗಳ ಪೂರ್ವಾಶ್ರಮದ ತಂದೆಯಾಗಿದ್ದಾರೆ. ಪತ್ನಿ, ಪುತ್ರ ವೇದವ್ಯಾಸ ತಂತ್ರಿ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ.

Sunday, August 11, 2013

ಕಟೀಲು ದೇವಸ್ಥಾನದಲ್ಲಿ ನಾಗರ ಪಂಚಮಿ ಸಂಭ್ರಮ


ಕಟೀಲು ದೇವಸ್ಥಾನದ ಒಳಾಂಗಣದಲ್ಲಿ ಹಾಗೂ ಹೊರಗಿನ ನಾಗದೇವರ ಸನ್ನಿಧಿ ಚಿತ್ರಕೂಟದಲ್ಲಿ ನಾಗರಾಧನೆ ನಡೆಯಿತು.

ಆ.೨೫: ಕಟೀಲು ದೇಗುಲದಲ್ಲಿ ಚಿನ್ನದ ರಥ ನಿರ್ಮಾಣಕ್ಕೆ ಸ್ವರ್ಣ ಮುಹೂರ್ತ


ಕುದ್ರು ಅಭಿವೃದ್ಧಿ ಕಾಮಗಾರಿ ಆರಂಭ, ಕಾಗದ ರಹಿತ ಕಚೇರಿ ಉದ್ಘಾಟನೆ
ಕಟೀಲು : ಪುರಾಣ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಭಿವೃದ್ಧಿ ಪರ್ವ ಆರಂಭವಾದಂತಿದೆ. ತಾ.೨೫ರಂದು ರಾಜ್ಯದಲ್ಲೇ ಅತ್ಯಂತ ಎತ್ತರವಾದ ಸುಮಾರು ನಾಲ್ಕು ಕೋಟಿ ರೂ.ಗೂ ಮಿಕ್ಕಿದ ಚಿನ್ನದ ರಥ ನಿರ್ಮಾಣಕ್ಕೆ ಸ್ವರ್ಣ ಮುಹೂರ್ತ ನಡೆಯಲಿದೆ. ಈಗಾಗಲೇ ಚಿನ್ನದ ರಥದ ಬೆಳ್ಳಿಯ ಕಾರ‍್ಯಗಳು ಪೂರ್ಣಗೊಂಡಿದ್ದು, ಚಿನ್ನದ ಕೆಲಸ ನಡೆಯಬೇಕಿದೆ. ಈ ಕಾರ‍್ಯಕ್ಕೆ ತಾ.೨೫ರ ಕಾರ‍್ಯಕ್ರಮದಲ್ಲಿ ಸಚಿವ ರಮಾನಾಥ ರೈ ಚಾಲನೆ ನೀಡಲಿದ್ದಾರೆ.
ಕಟೀಲು ಭ್ರಾಮರೀಯ ಮೂಲಸ್ಥಾನ ಕುದ್ರುವಿನಲ್ಲಿ ಸುಮಾರು ಎರಡು ಕೋಟಿ ರೂ.ಗಳಲ್ಲಿ ಕೆರೆಗಳ ನಿರ್ಮಾಣ, ಯಾಜ್ಞಿಕ ವೃಕ್ಷಗಳ ನೆಡುವಿಕೆ, ಮಾಡು ರಹಿತ ಗರ್ಭಗುಡಿಯ ನಿರ್ಮಾಣ ಹೀಗೆ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಆಗಿರುವ ಕಾಮಗಾರಿಗಳನ್ನು ಸಚಿವ ವಿನಯಕುಮಾರ ಸೊರಕೆ ಉದ್ಘಾಟಿಸಲಿದ್ದಾರೆ.
ದೇಗುಲದ ಸೇವಾ, ಆಡಳಿತ ಕಚೇರಿಯಲ್ಲಿ ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದ್ದು, ಕಾಗರ ರಹಿತ ಕಚೇರಿಯನ್ನಾಗಿಸುವ ಪ್ರಯತ್ನ ಮಾಡಲಾಗಿದೆ. ಈ ಯೋಜನೆಯನ್ನು ಉದ್ಘಾಟಿಸುವವರು ಸಚಿವ ಯು.ಟಿ.ಖಾದರ್. ಈ ಸಂದರ್ಭ ಉಪಸ್ಥಿತರಿರುವವರು ಸಚಿವ ಅಭಯಚಂದ್ರ ಜೈನ್, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಾಂಸದ ನಳಿನ್ ಕುಮಾರ್, ಶಾಸಕರಾದ ಜೆ.ಆರ್.ಲೋಬೋ, ಮೊಯ್ದಿನ್‌ಬಾವಾ, ಗಣೇಶ ಕಾರ್ಣಿಕ್, ಮೋನಪ್ಪ ಭಂಡಾರಿ, ದಯಾನಂದ ರೆಡ್ಡಿ, ಧಾಂಇಕ ಆಯುಕ್ತ ನಂದಕುಮಾರ್, ಜಿಲ್ಲಾಧಿಕಾರಿ ಎನ್.ಪ್ರಕಾಶ್ ಸೇರಿದಂತೆ ವಿವಿಧ ದಾನಿಗಳು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.