ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಪ್ರಯುಕ್ತ ಕಟೀಲು ದೇವಸ್ಥಾನ ಹಾಗೂ ದ.ಕ.ಜಿಲ್ಲಾ ಬಾಲ್ ಬ್ಯಾಡ್‌ಮಿಂಟನ್ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ನಡೆದ
ರಾಜ್ಯ ಮಟ್ಟದ ಸಬ್ ಜೂನಿಯರ್ ಬಾಲ್ ಬ್ಯಾಡ್‌ಮಿಂಟನ್ ಲೀಗ್ ಚಾಂಪಿಯನ್‌ಶಿಪ್ ಪಂದ್ಯಕೂಟದಲ್ಲಿ ಬಾಲಕರ ಹಾಗೂ ಬಾಲಕಿಯರ ಎರಡೂ ವಿಭಾಗದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ತಂಡಗಳು ವಿಜೇತರಾಗಿ ಪ್ರಥಮ ಪ್ರಶಸ್ತಿ ಪಡೆದವು.
ಉಳಿದಂತೆ ಬಾಲಕರ ವಿಭಾಗದಲ್ಲಿ ಜಯ ಸ್ಪೋರ್ಟ್ಸ್ ಬೆಂಗಳೂರು, ಶರಣಾಂಬ ಪ್ರೌಢಶಾಲೆ ಹೊನ್ನುಡಿಕೆ ತುಮಕೂರು ಹಾಗೂ ಮೂಡುಗಿಳಿಯಾರು ಕೋಟ ತಂಡಗಳು ಅನಂತರದ ಸ್ಥಾನ ಪಡೆದವು.
ಬಾಲಕಿಯರ ವಿಭಾಗದಲ್ಲಿ ತುಮಕೂರಿನ ಎಸ್‌ಬಿಬಿಸಿ, ಪಾಂಡವಪುರ ತಂಡಗಳು ದ್ವಿತೀಯ, ತೃತೀಯ ಸ್ಥಾನ ಪಡೆದವು.
ಮೂಡುಬಿದ್ರೆಯ ಲಾವಣ್ಯ ಹಾಗೂ ನಿಶಾಂತ್ ವೈಯಕ್ತಿಕ ಪ್ರಶಸ್ತಿ ಪಡೆದರು. ಇದೇ ಸಂದರ್ಭ ಉತ್ತಮ ಸಾಧನೆಗೈದ ಆಟಗಾರರನ್ನು ಗುರುತಿಸಿ ರಾಷ್ಟ್ರಮಟ್ಟದ ಬಾಲ್‌ಬ್ಯಾಡ್‌ಮಿಂಟನ್‌ಗೆ ರಾಜ್ಯತಂಡವನ್ನು ಆಯ್ಕೆಗೊಳಿಸುವ ತರಬೇತಿಗೆ ಆರಿಸಲಾಯಿತು.
ಉತ್ತಮ ಸಾಧನೆಗೈದ ಮೂಡುಗಿಳಿಯಾರಿನ ಚಿತ್ರಾ, ಸುರೇಖಾ, ಜಯ ಸ್ಪೋರ್ಟ್ಸ್‌ನ ಪಲ್ಲವಿ, ಹೊನ್ನುಡಿಕೆಯ ಕಾವ್ಯ, ಆಳ್ವಾಸ್‌ನ ಕಾವ್ಯ, ಕಟೀಲಿನ ಹರ್ಷಿತ್, ಕಾರ್ತಿಕ್, ತುಮಕೂರಿನ ಪವನ್, ಪಾಂಡವಪುರದ ಶರತ್, ಪ್ರಜ್ವಲ್‌ರಿಗೆ ನಗದು ಬಹುಮಾನ ನೀಡಲಾಯಿತು.
ಸಾಂಸದ ನಳಿನ್ ಕುಮಾರ್, ಜಿ.ಪಂ.ಸದಸ್ಯ ಈಶ್ವರ್, ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಪ್ರೌಢಶಾಲೆಯ ಉಪಪ್ರಾಚಾರ‍್ಯ ಸುರೇಶ್ ಭಟ್, ಹಳೆ ವಿದ್ಯಾರ್ಥಿ ಸಂಘದ ಹರಿನಾರಾಯಣದಾಸ ಆಸ್ರಣ್ಣ, ಧನಂಜಯ ಶೆಟ್ಟಿಗಾರ್, ಕರ್ನಾಟಕ ಬಾಲ್ ಬ್ಯಾಡ್‌ಮಿಂಟನ್ ಸಂಸ್ಥೆಯ ದಿನೇಶ್, ಮರವೂರುಬೀಡು ಬಾಬು ಶೆಟ್ಟಿ, ಶಿವಣ್ಣ, ಪ್ರವೀಣ್ ಕುಮಾರ್ ಮುಂತಾದವರಿದ್ದರು.
ಶನಿವಾರ ಸಚಿವ ಅಭಯಚಂದ್ರ, ಕಟೀಲು ದೇಗುಲದ ಆಡಳಿತಾಧಿಕಾರಿ ಅಜಿತ್ ಕುಮಾರ ಹೆಗ್ಡೆ, ಸಂಜೀವಿನಿ ಚಾರಿಟೇಬಲ್ ಟ್ರಸ್ಟ್‌ನ ಡಾ| ಸುರೇಶ್ ರಾವ್, ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಮಾಲಾಡಿ ಬಾಲಕೃಷ್ಣ ಶೆಟ್ಟಿ, ಪ್ರವೀಣ್ ಕುಮಾರ್, ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ವಿಜೇತ ಮಹಾದೇವ, ಉದ್ಯಮಿಗಳಾದ ಯಾದವಕೋಟ್ಯಾನ್, ಗಿರೀಶ್ ಶೆಟ್ಟಿ, ಸಂತೋಷ್ ಕುಮಾರ್ ಹೆಗ್ಡೆ, ಸಂದೀಪ್ ಶೆಟ್ಟಿ, ರಾಜ್ಯ ಬಾಲ್ ಬ್ಯಾಡ್ ಮಿಂಟನ್ ಅಧ್ಯಕ್ಷ ಪ್ರಕಾಶ್ ಹೆಬ್ಬಾಳ, ಪ್ರಧಾನ ಕಾರ್ಯದರ್ಶಿ ರಾಜರಾವ್, ಕಾರ್ಯದರ್ಶಿ ದಿನೇಶ್, ಕೋಶಾಧಿಕಾರಿ , ದ.ಕ. ಬಾಲ್ ಬ್ಯಾಡ್ ಮಿಂಟನ್ ಅಧ್ಯಕ್ಷ ಮಹಮ್ಮದ್ ಇಲ್ಯಾಸ್, ಮತ್ತಿತರರ ಉಪಸ್ಥಿತಿಯಲ್ಲಿ ಪಂದ್ಯಕೂಟ ಉದ್ಘಾಟನೆಗೊಂಡಿತ್ತು. ರಾಜ್ಯದ ವಿವಿಧ ಶಾಲೆಗಳ ಬಾಲಕರ, ಬಾಲಕಿಯರ ೪೫ ತಂಡಗಳು ಭಾಗವಹಿಸಿದ್ದವು.

No comments:
Post a Comment