ಉಲ್ಲಂಜೆ ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ತಾ.೨೪ರಿಂದ ತಾ.೩೦ರವರೆಗೆ ಕಟೀಲು ಶ್ರೀ ದು.ಪ.ದೇ.ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕಗಳ ವಾರ್ಷಿಕ ಶಿಬಿರ ನಡೆಯಲಿದೆ.ಸ್ಥಳೀಯ ರಸ್ತೆಗಳ ರಿಪೇರಿ, ಶೌಚಾಲಯಗಳ ನಿರ್ಮಾಣ ಮುಂತಾದ ಕಾರ್‍ಯಕ್ರಮಗಳನ್ನು ಶಿಬಿರದಲ್ಲಿ ಆಯೋಜಿಸಲಾಗಿದೆ ಎಂದು ಯೋಜನಾಧಿಕಾರಿ ಕೇಶವ ಎಚ್. ತಿಳಿಸಿದ್ದಾರೆ.
Thursday, December 23, 2010
Tuesday, December 21, 2010
Saturday, December 18, 2010
ನಿಡ್ಡೋಡಿ ಐಟಿಐನಲ್ಲಿ ಗ್ರಾಮೋತ್ಸವ
ಅತ್ಯಂತ ಜ್ಞಾನಿಗಳೂ, ಬರೆಯಲೂ ಓದಲೂ ಬಾರದ ಅನಕ್ಷಸ್ಥರು, ಅತ್ಯಂತ ಶ್ರೀಮಂತರೂ, ಕಡು ಬಡವರೂ, ಆರೋಗ್ಯವಂತರೂ, ಕಾಯಿಲೆಗಳಿಂದ ನರಳುವವರೂ ಹೀಗೆ ಜನರ ಮಧ್ಯೆ ದೊಡ್ಡದಾದ ಅಂತರವನ್ನು ನಮ್ಮ ದೇಶದಲ್ಲಿ ಕಾಣಬಹುದು. ಸ್ವಾತಂತ್ರ್ಯಾನಂತರ ಸಮಾನತೆಯ ಸಮಾಜದ ಸ್ಥಾಪನೆಗಾಗಿ ಕೇಂದ್ರ ರಾಜ್ಯ ಸರಕಾರಗಳು ಅದೆಷ್ಟು ಪ್ರಯತ್ನ ಪಟ್ಟರೂ ಯಶಸ್ಸು ಸಾಧ್ಯವಾಗುತ್ತಿಲ್ಲ. ಪ್ರತಿ ಗ್ರಾಮವನ್ನು ಆದರ್ಶವಾಗಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದಾಗ ದೇಶ ಬಲಿಷ್ಟವಾಗಬಲ್ಲದು ಎಂದು ಮೂಡುಬಿದ್ರೆಯ ಡಾ.ಮೋಹನ ಆಳ್ವ ಹೇಳಿದರು.ಅವರು ಶನಿವಾರ ರಾತ್ರಿ ನಿಡ್ಡೋಡಿಯಲ್ಲಿ ಜ್ಞಾನರತ್ನ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಶ್ರೀ ದುರ್ಗಾದೇವಿ ಕೈಗಾರಿಕಾ ತರಬೇತಿ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ನಿಡ್ಡೋಡಿ ಗ್ರಾಮೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.ಗ್ರಾಮೋತ್ಸವದ ಬಗ್ಗೆ ಉಪನ್ಯಾಸಗೈದ ಗಣೇಶ್ ಅಮೀನ್ ಸಂಕಮಾರ್, ನಮ್ಮ ಮಣ್ಣಿನ ಪ್ರೀತಿ, ಅಭಿಮಾನಗಳನ್ನು ಜಾನಪದ ಸಂಸ್ಕೃತಿ ನಮಗೆ ಕಲಿಸಿಕೊಡುತ್ತದೆ ಎಂದರು.ಸಾಂಸದ ನಳಿನ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಕ್ಷಣದೊಂದಿಗೆ ರಾಷ್ಟ್ರಪ್ರೇಮವನ್ನು ಹೆಚ್ಚಿಸುವ ಬಗ್ಗೆ ಶಿಕ್ಷಕರು ಹೆಚ್ಚು ಆಸಕ್ತಿ ವಹಿಸಬೇಕೆಂದರು.ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಎಂ.ಆರ್.ಜೈನ್, ತೋಕೂರು ಐಟಿಐನ ವೈ.ಎನ್.ಸಾಲ್ಯಾನ್, ವೇಣೂರು ಐಟಿಐನ ಸದಾನಂದ ಪೂಜಾರಿ ಮತ್ತಿತರರಿದ್ದರು.ಸಂಸ್ಥೆಯ ಅಧ್ಯಕ್ಷ ಭಾಸ್ಕರ ದೇವಸ್ಯ ಸ್ವಾಗತಿಸಿದರು. ಐಟಿಐನ ಪ್ರಾಚಾರ‍್ಯೆ ಅನುರಾಧಾ ಎಸ್.ಸಾಲ್ಯಾನ್ ವರದಿ ವಾಚಿಸಿದರು. ಸಂಸ್ಥೆಯ ವಿದ್ಯಾರ್ಥಿಗಳಿಂದ, ನಿಡ್ಡೋಡಿ ಗ್ರಾಮದ ಪ್ರತಿಭಾವಂತರಿಂದ ಸಾಂಸ್ಕೃತಿಕ, ಜಾನಪದ ಕಾರ‍್ಯಕ್ರಮಗಳು ನಡೆದವು.
Saturday, December 11, 2010
Friday, December 10, 2010
ಗಿಡಿಗೆರೆ ದೈವಸ್ಥಾನಕ್ಕೆ ಶಿಲಾನ್ಯಾಸ
ಕಟೀಲು ಗಿಡಿಗೆರೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನಕ್ಕೆ ಶುಕ್ರವಾರ ಶಿಲಾನ್ಯಾಸ ಮಾಡಲಾಯಿತು. ಶಿಬರೂರು ಹಯಗ್ರೀವ ತಂತ್ರಿ, ಕಟೀಲು ಹರಿನಾರಾಯಣದಾಸ ಆಸ್ರಣ್ಣ, ಪಂಜ ವಾಸುದೇವ ಭಟ್ ಧಾರ್ಮಿಕ ವಿಧಿಗಳ ಮೂಲಕ ಶಿಲಾನ್ಯಾಸಗೈದರು.ಸಚಿವ ವಿ.ಎಸ್.ಆಚಾರ್‍ಯ, ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಕಟೀಲು ಚರ್ಚ್‌ನ ಫಾ.ರಾಬರ್ಟ್ ಕ್ರಾಸ್ತಾ, ಮಾಜಿ ಶಾಸಕ ಸೋಮಪ್ಪ ಸುವರ್ಣ, ಜಿ.ಪಂ.ಸದಸ್ಯರಾದ ಶೈಲಾ ಸಿಕ್ವೇರ, ಪ್ರಮೋದ್ ಕುಮಾರ್, ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ರವಿಶಂಕರ ಶೆಟ್ಟಿ, ಎಂಆರ್‌ಪಿಎಲ್‌ನ ಲಕ್ಷ್ಮೀ ಕುಮಾರನ್, ಎಕ್ಕಾರು ಮೋನಪ್ಪ ಶೆಟ್ಟಿ, ಸುಭಾಶ್ಚಂದ್ರ ಪಡಿವಾಳ್, ಗಿರೀಶ್ ಶೆಟ್ಟಿ, ಸೀತಾರಾಮ ಕೊಂಚಾಡಿ, ಲೀಲಾಧರ ಶೆಟ್ಟಿ, ತಿಮ್ಮಪ್ಪ ಮೇಸ್ತ್ರಿ ಮತ್ತಿತರರಿದ್ದರು. ಅರುಣಾ ಕುಮಾರಿ ಪ್ರಾರ್ಥಿಸಿದರು. ಪುರುಷೋತ್ತಮ ಶೆಟ್ಟಿ ಸ್ವಾಗತಿಸಿದರು. ರುಕ್ಮಯ, ಕಿರಣ್ ಪಕ್ಕಳ ಕಾರ್‍ಯಕ್ರಮ ನಿರೂಪಿಸಿದರು.
ಕಟೀಲಿನಲ್ಲಿ ಶ್ರೀ ಹನುಮದ್ ಶಕ್ತಿಜಾಗರಣ ಯಜ್ಞ
ಮುಲ್ಕಿ ತಾಲೂಕು ಶ್ರೀ ಹನುಮದ್ ಶಕ್ತಿ ಜಾಗರಣ ಸಮಿತಿ ಆಶ್ರಯದಲ್ಲಿ ಶ್ರೀ ಹನುಮದ್ ಶಕ್ತಿಜಾಗರಣ ಯಜ್ಞ ಹಾಗೂ ಹಿಂದೂ ಸಾಮಾವೇಶ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸ್ಮಾರಕ ಸಭಾಭವನದಲ್ಲಿ ಭಾನುವಾರ(ತಾ.೧೨) ನಡೆಯಲಿದೆ.ಬೆಳಿಗ್ಗೆ ೯ಕ್ಕೆ ಯಜ್ಞ ೧೧.೩೦ ಗಂಟೆಗೆ ನಡೆಯುವ ಸಭಾಕಾರ್‍ಯಕ್ರಮದಲ್ಲಿ ಗುರುಪುರ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾ.ಸೀತಾರಾಮ್ ಭಾಗವಹಿಸಲಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ದೊಡ್ಡಯ್ಯ ಮೂಲ್ಯ ತಿಳಿಸಿದ್ದಾರೆ.
Thursday, December 9, 2010
Wednesday, December 8, 2010
ಕಟೀಲಿನಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್
ಭಾರತೀಯರಲ್ಲಿ ಗಳಿಸಿದ್ದರಲ್ಲಿ ಉಳಿಸುವ ಗುಣ ಸಹಜವಾಗಿ ರೂಢಿಯಾಗಿದೆ ಎಂದು ಉನ್ನತ ಶಿಕ್ಷಣ ಹಾಗೂ ಮುಜರಾಯಿ ಸಚಿವ ಡಾ.ವಿ.ಎಸ್.ಆಚಾರ್‍ಯ ಹೇಳಿದರು.ಅವರು ಶುಕ್ರವಾರ ಕಟೀಲಿನ ಸೌಂದರ್‍ಯ ಪ್ಯಾಲೇಸ್ ವಾಣಿಜ್ಯ ಸಂಕೀರ್ಣದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ೪೩೨ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಕರಾವಳಿ ಜಿಲ್ಲೆ ಬ್ಯಾಂಕಿಂಗ್ ಕ್ಷೇತ್ರದ ತೊಟ್ಟಿಲು ಆಗಿದೆ. ೧೯೬೯ರಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣವಾದ ಬಳಿಕ ಬ್ಯಾಂಕುಗಳ, ಶಾಖೆಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಆದರೆ ದೇಶದಲ್ಲಿ ಇವತ್ತಿಗೂ ೨೦ರಿಂದ ೩೦ಶೇಕಡಾ ಮಂದಿ ಬ್ಯಾಂಕಿಂಗ್ ಕ್ಷೇತ್ರದಿಂದ ಹೊರಗಿದ್ದಾರೆ ಎಂದು ಡಾ. ಆಚಾರ್‍ಯ ಹೇಳಿದರು.
ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ, ಕಟೀಲು ದೇಗುಲದ ಅರ್ಚಕರಾದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಸೌಂದರ್‍ಯ ಪ್ಯಾಲೇಸ್‌ನ ರಮೇಶ್, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶೈಲಾ ಶೆಟ್ಟಿ, ಬ್ಯಾಂಕಿನ ಪ್ರಾದೇಶಿಕ ಪ್ರಬಂಧಕರಾದ ಎಸ್.ಸಿ.ಬಿರಾದಾರ ಮತ್ತಿತರರಿದ್ದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಬ್ಯಾಂಕಿನ ಮಹಾಪ್ರಬಂಧಕ ವಾಸುದೇವ ಕೆ.ಕಾಲಕುಂದ್ರಿ, ಈ ಹಿಂದೆ ನೇತ್ರಾವತಿ, ಮಲಪ್ರಭಾ, ವರದಾ, ಬಿಜಾಪುರ ಹೀಗೆ ೯ಜಿಲ್ಲೆಗಳಲ್ಲಿದ್ದ ಸಣ್ಣ ಬ್ಯಾಂಕ್‌ಗಳನ್ನು ಒಂದಾಗಿಸಿ ಮಾಡಲಾದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಇವತ್ತು ೮ಸಾವಿರ ಕೋಟಿ ರೂ.ವ್ಯವಹಾರಗಳ ಸಾಧನೆ ಮಾಡಿದೆ. ೪೫ಲಕ್ಷ ಗ್ರಾಹಕರಿದ್ದಾರೆ ಎಂದು ಮಾಹಿತಿ ನೀಡಿದರು.ನಾರಾಯಣ ಯಾಜಿ ಕಾರ್‍ಯಕ್ರಮ ನಿರೂಪಿಸಿದರು. ಶೇಖರ ಶೆಟ್ಟಿ ಸ್ವಾಗತಿಸಿದರು. ಗ್ರಾಹಕರ ಪರವಾಗಿ ಪಿ.ಸತೀಶ್ ರಾವ್ ಮಾತನಾಡಿದರು. ಶಾಖಾಧಿಕಾರಿ ಶ್ರೀಪಾದ ರಾವ್ ಎಂ.ವಂದಿಸಿದರು.
Friday, December 3, 2010
ಕಟೀಲು ಹಿ.ಪ್ರಾ.ಶಾಲೆಯಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ


ಕಟೀಲು ಹಿ.ಪ್ರಾ.ಶಾಲೆಯಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಪ್ರಯುಕ್ತ ಪದ್ಮನೂರು, ಉಲ್ಲಂಜೆ ಕ್ಲಸ್ಟರ್ ವತಿಯಿಂದ ಅಂಗವಿಕಲರಿಗಾಗಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ದೇಗುಲದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ವಿತರಿಸಿದರು. ಮುಖ್ಯೋಪಾಧ್ಯಾಯಿನಿ ಮಾಲತಿ, ಇಲಾಖೆಯ ಅನಂತರಾಮ ರಾವ್, ವಾಸುದೇವ ಶೆಣೈ ಮತ್ತಿತರರಿದ್ದರು.
ಅಂಗವಿಕಲರಿಗೆ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಿ
ಅಂಗವಿಕಲರಿಗೆ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಿ
Wednesday, December 1, 2010
Subscribe to:
Posts (Atom)





