ಬ್ರಾಹ್ಮಣ್ಯದ ಉಳಿವಿನಿಂದ ಗೌರವ-ವೇದವ್ಯಾಸ ಐತಾಳ್
ಕಟೀಲು : ಜಪ, ಪೂಜೆ, ಧಾರ್ಮಿಕ ಕರ್ಮಾನುಷ್ಟಾನಗಳಿಂದ, ನಡತೆಯಿಂದ ಬ್ರಾಹ್ಮಣ್ಯವನ್ನು ಉಳಿಸಿಕೊಂಡರಷ್ಟೇ ಬ್ರಾಹ್ಮಣರಿಗೆ ಗೌರವ. ಆಧುನಿಕತೆಯ ಜೊತೆಜೊತೆಯಲ್ಲೇ ಸಂಪ್ರದಾಯ, ಆಚರಣೆಗಳ, ಸಂಬಂಧ, ಮಹತ್ವಗಳ ಅರಿವು ಇಂದಿನ ಜನಾಂಗಕ್ಕೆ ಕೊಡಬೇಕಾದ ಅಗತ್ಯವಿದೆ ಎಂದು ಉಡುಪಿ ಅನಂತೇಶ್ವರ ದೇವಸ್ಥಾನದ ಸಗ್ರಿ ವೇದವ್ಯಾಸ ಐತಾಳ್ ಹೇಳಿದರು.
ಅವರು ಭಾನುವಾಋ ಕಟೀಲು ನಂದಿನಿ ಬ್ರಾಹ್ಮಣ ಸಭಾದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಬರಹಗಾರ್ತಿ ಶಕುಂತಳಾ ಭಟ್, ಇವತ್ತಿನ ದಿನಮಾನಕ್ಕೆ ಅನುಗುಣವಾಗಿ ಸಂಘಟನೆಯೊಂದಿಗೆ ಆಚರಣೆಗಳಲ್ಲಿ, ಅನುಷ್ಠಾನಗಳಲ್ಲಿ ಬದಲಾವಣೆಯ ಕುರಿತೂ ಚಿಂತಿಸಬೇಕಾಗಿದೆ ಎಂದರು.
ಸಾಧಕ ಎಕ್ಕಾರು ಡಾ.ಪದ್ಮನಾಭ ಭಟ್, ಸೌಮ್ಯಾ ನಾರಾಯಣ ಭಟ್‌ರನ್ನು ಅಭಿನಂದಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಸಭಾದ ಅಧ್ಯಕ್ಷ ಡಾ.ಶಶಿಕುಮಾರ್, ಕಾರ‍್ಯದರ್ಶಿ ಕೊಡೆತ್ತೂರು ವೇದವ್ಯಾಸ ಉಡುಪ, ರಾಘವೇಂದ್ರ ಭಟ್, ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತ ಆಸ್ರಣ್ಣ ಮತ್ತಿತರರಿದ್ದರು. ಅನಂತಕೃಷ್ಣ, ಸುಧಾ ಉಡುಪ ಅತಿಥಿಗಳನ್ನು ಪರಿಚಯಿಸಿದರು. ಸುರೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.

No comments:
Post a Comment