Friday, December 6, 2013

ಧ್ವಜಸ್ಥಂಭ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಕೊಡೆತ್ತೂರು ಮಾಗಂದಡಿ ಕುಟುಂಬಿಕರು ಕೊಡುಗೆಯಾಗಿ ನೀಡುವ ಧ್ವಜಸ್ತಂಭಕ್ಕೆ ಸುಳ್ಯದ ಮಿತ್ತೂರು ಉಬರಡ್ಕದ ರಾಮಮೋಹನ ಭಟ್ ಎಂಬವರ ತೋಟದಿಂದ ಮರವನ್ನು ವೈಭವದ ಮೆರವಣಿಗೆಯಲ್ಲಿ ಶುಕ್ರವಾರ ತರಲಾಯಿತು.
ಡಿ.5ರಂದು ಹೊರಟ ಮೆರವಣಿಗೆ ಪುತ್ತೂರು, ಬಂಟ್ವಾಳ, ಮಂಗಳೂರು ಮೂಲ್ಕಿ ತಲುಪಿ, ಶುಕ್ರವಾರ ಡಿ.6ರ ಸಂಜೆ ಹೊತ್ತಿಗೆ ಕಟೀಲಿಗೆ ತರಲಾಯಿತು.
ಸುಮಾರು ೫ಲಕ್ಷ ರೂ. ವೆಚ್ಚದ ಈ ಮರದಿಂದ ಮುಂದಿನ ಎರಡು ವರ್ಷದೊಳಗೆ ಹೊಸ ಧ್ವಜಸ್ಥಂಭವನ್ನು ನಿರ್ಮಿಸಲಾಗುವುದು. ಈಗಿರುವ

ಧ್ವಜಸ್ಥಂಭವನ್ನು ೧೯೭೦ರಲ್ಲಿ ಪ್ರತಿಷ್ಟಾಪಿಸಲಾಗಿದ್ದು ಅದನ್ನು ಪುತ್ತೂರು ಪಾಣಾಜೆಯಿಂದ ತರಲಾಗಿತ್ತು. ಈಗಿನದ್ದು ಬೆಳ್ಳಿಯ ಧ್ವಜಸ್ತಂಭವಾಗಿದ್ದು ಮುಂದಕ್ಕೆ ಹೊಸ ಧ್ವಜಸ್ಥಂಭಕ್ಕೆ ಭಕ್ತರ ಸಹಕಾರದಿಂದ ಬೆಳ್ಳಿಯ ತಗಡಿಗೆ ೪.೫ಕೆಜಿ ಚಿನ್ನವನ್ನು ಹೊದಿಸಲಾಗುವುದು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.
ದೇಗುಲದ ಆಡಳಿತಾಧಿಕಾರಿ ಕೃಷ್ಣಮೂರ್ತಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಆಸ್ರಣ್ಣ ಸಹೋದರರಾದ ಲಕ್ಷ್ಮೀನಾರಾಯಣ, ವೇಂಕಟರಮಣ, ಅನಂತಪದ್ಮನಾಭ, ಕಮಲಾದೇವಿ ಪ್ರಸಾದ, ಶ್ರೀಹರಿನಾರಾಯಣ, ಕುಮಾರ ಆಸ್ರಣ್ಣ, ಶಿಬರೂರು ವೇದವ್ಯಾಸ ತಂತ್ರಿ, ಕೊಡೆತ್ತೂರು ಮಾಗಂದಡಿ ಕುಟುಂಬದ ಪ್ರಮುಖರಾದ ಬಿ.ಆರ್.ಶೆಟ್ಟಿ, ಅತ್ತೂರು ಕೊಡೆತ್ತೂರು ಗ್ರಾಮಸ್ಥರು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.
ಚಿತ್ರ : ಕಟೀಲ್ ಸ್ಟುಡಿಯೋ

No comments:

Post a Comment