Sunday, December 1, 2013

ಪದವೀಪೂರ್ವ ಕಾಲೇಜು ಪ್ರತಿಭಾ ಪುರಸ್ಕಾರ


ಕಟೀಲು : ಇಂದಿನ ನಗರದ ಶಿಕ್ಷಣ ಟ್ಯೂಷನ್ ಮತ್ತು ಟೆನ್‌ಶನ್ ಸಹಿತವಾಗಿಯೇ ಇದೆ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಸಂಸ್ಕಾರಭರಿತ ನೈತಿಕ ಶಿಕ್ಷಣ ಸಿಗುತ್ತಿದೆ ಆಗಬೇಕು ಎಂದು ಸಾಂಸದ ನಳಿನ್ ಕುಮಾರ್ ಹೇಳಿದರು.
ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಮಂಗಳೂರು ಶಾರದಾ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಮ್.ಬಿ. ಪುರಾಣಿಕ್, ಕಟೀಲು ದೇವಳ ಆಡಳಿತ ಮೊಕ್ತೇಸರ ವಾಸುದೇವ ಆಸ್ರಣ್ಣ,ಶಾಲಾ ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ಈಶ್ವರ್ ಕಟೀಲ್, ವಿದ್ಯಾರ್ಥಿ ನಾಯಕಿ ಅನುಜ್ಞಾ ಭಟ್ ಮತ್ತಿತರರಿದ್ದರು. ಯುವಜನ ಸೇವಾ ಮತ್ತು ಮೀನುಗಾರಿಕೆ ಸಚಿವ ಕೆ ಅಭಯಚಂದ್ರ ಜೈನ್ ಹಾಗೂ ನಿವೃತ್ತ ಉಪಪ್ರಾಚಾರ್ಯ, ಸಾಹಿತಿ ಉಮೇಶ್ ರಾವ್ ಎಕ್ಕಾರು ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಮಟ್ಟದಲ್ಲಿ ಆಯ್ಕೆಯಾದ ಶಾಲಾ ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು.
ಪ್ರಾಚಾರ್ಯ ಜಯರಾಮ ಪೂಂಜ ಸ್ವಾಗತಿಸಿದರು. ವಿಜಯಾ ಆಳ್ವ ವಂದಿಸಿದರು. ಭಾರತಿ ಶೆಟ್ಟಿ, ಕವಿತಾ ಹಾಗೂ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment