ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯ ಸುವರ್ಣ ಮಹೋತ್ಸವ ವರ್ಷಾಚರಣೆಯ ಸಂಭ್ರಮದ ಸಲುವಾಗಿ ಜುಲೈ ೨೦ರ ಶನಿವಾರ ಕಟೀಲು ಸರಸ್ವತೀ ಸದನದಲ್ಲಿ ಅವಿಭಜಿತ ದ.ಕ. ಜಿಲ್ಲಾ ಮಟ್ಟದ(ಮಂಗಳೂರು ಮತ್ತು ಉಡುಪಿ) ಪ್ರೌಢಶಾಲಾ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಪರ್ಧೆಯು ಬಾಲಕರಿಗೆ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ನಡೆಯಲಿದ್ದು, ಭಕ್ತಿಗೀತೆ, ದೇಶಭಕ್ತಿ ಗೀತೆ ಹಾಗೂ ಭಾವಗೀತೆ ವಿಭಾಗಗಳಲ್ಲಿ ಗಾಯನ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ನಗದು ಬಹುಮಾನವಿದೆ. ಒಂದು ಸಂಸ್ಥೆಯಿಂದ ಪ್ರತಿ ವಿಭಾಗಕ್ಕೆ ಒಬ್ಬ ಸ್ಪರ್ಧಿಗೆ ಮಾತ್ರ ಅವಕಾಶವಿದ್ದು, ಭಾಗವಹಿಸಲಿಚ್ಚಿಸುವ ಸ್ಪರ್ಧಿಗಳು, ತಾವು ಪ್ರತಿನಿಧಿಸುವ ಶಾಲೆಯ ಮುಖ್ಯೋಪಾಧ್ಯಾಯರ ಸಹಿಯುಳ್ಳ ಪತ್ರದೊಂದಿಗೆ, ದೂರವಾಣಿ ಸಂಖ್ಯೆಯ ಸಹಿತ ಜುಲೈ ೧೫ರ ಒಳಗಾಗಿ ಶ್ರೀ ಸುರೇಶ್ ಭಟ್(೯೪೪೯೪೩೭೭೯೩) ಉಪಪ್ರಾಚಾರ‍್ಯರು, ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆ, ಕಟೀಲು, ಮಂಗಳೂರು ತಾಲೂಕು, ದ.ಕ.-೫೭೪೧೪೮. ಇಲ್ಲಿಗೆ ತಿಳಿಸಬಹುದು ಎಂದು ಪ್ರಕಟನೆ ತಿಳಿಸಿದೆ.
No comments:
Post a Comment