ಕಟೀಲು : ದುರ್ಗಾಪರಮೇಶ್ವರೀ ದೇಗುಲದಿಂದ ನಡೆಸಲ್ಪಡುವ ಪ್ರಾಥಮಿಕ, ಪ್ರೌಢ, ಪದವೀಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಕ್ರೀಡಾ ಉತ್ತೇಜನಕ್ಕೆ ತಲಾ ೫೦ಸಾವಿರದಂತೆ ೨ಲಕ್ಷ ರೂ.ಗಳನ್ನು ಕಟೀಲು ದೇಗುಲದ ವತಿಯಿಂದ ನೀಡಲು ಉದ್ದೇಶಿಸಲಾಗಿದೆ ಎಂದು ಮೊಕ್ತೇಸರ ವಾಸುದೇವ ಆಸ್ರಣ್ಣ ತಿಳಿಸಿದರು.
ಅವರು ಕಟೀಲು ದೇಗುಲ ಹಾಗೂ ಮುಂಬೈ ಸಂಜೀವಿನಿ ಟ್ರಸ್ಟ್ ವತಿಯಿಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಗೀತ, ಯೋಗ, ಚಿತ್ರ, ನಾಟ್ಯ, ಇಂಗ್ಲಿಷ್, ಸಂಸ್ಕೃತ ಸಂಭಾಷಣೆ ತರಗತಿ ಹಾಗೂ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಸಂಭಾಷಣೆ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಶಿಕ್ಷಕ ರಕ್ಷಕ ಸಂಘದ ಅನಂತಪದ್ಮನಾಭ ಆಸ್ರಣ್ಣ, ಸಂಜೀವಿನಿ ಟ್ರಸ್ಟ್‌ನ ಡಾ.ಸುರೇಶ್ ರಾವ್, ಜಿ.ಪಂ.ಸದಸ್ಯ ಈಶ್ವರ್, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಕಿಲೆಂಜೂರು, ಮುಖ್ಯ ಶಿಕ್ಷಕಿ ಮಾಲತಿ ಮತ್ತಿತರರಿದ್ದರು. ಹರಿನಾರಾಯಣದಾಸ ಆಸ್ರಣ್ಣ ಪ್ರಸ್ತಾವನೆಗೈದರು. ಉಪಪ್ರಾಚಾರ್ಯ ಸುರೇಶ್ ಭಟ್ ಸ್ವಾಗತಿಸಿದರು. ವಾಸುದೇವ ಶೆಣೈ ವಂದಿಸಿದರು.
No comments:
Post a Comment