ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯ ಸುವರ್ಣ ಮಹೋತ್ಸವ ವರ್ಷಾಚರಣೆಯ ಉದ್ಘಾಟನೆ ಶನಿವಾರ ಸರಸ್ವತೀ ಸದನದಲ್ಲಿ ನಡೆಯಿತು.
ಮಧುರೈ ಹೈಟೆಕ್ ಅರೈ ಲಿ.ನ ಆಡಳಿತ ನಿರ್ದೇಶಕ ಬಿ.ಟಿ.ಬಂಗೇರ ಉದ್ಘಾಟಿಸಿ, ಭ್ರಷ್ಟಾಚಾರ ಇಲ್ಲವಾಗಿಸಲು ಮಕ್ಕಳಲ್ಲಿ ನೈತಿಕ ಶಿಕ್ಷಣವನ್ನು ನೀಡುವ ಅಗತ್ಯವಿದೆ ಎಂದರು.
ಸಂಗೀತ, ನೃತ್ಯ, ಯೋಗ ತರಗತಿಗಳನ್ನು ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಉದ್ಘಾಟಿಸಿದರು.
ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಮಧುಕರ ಅಮೀನ್, ಸುವರ್ಣ ಮಹೋತ್ಸವದ ಸಲುವಾಗಿ ವರ್ಷವಿಡೀ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿ.ಪಂ.ಸದಸ್ಯ ಈಶ್ವರ ಕಟೀಲ್ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಚಾರ‍್ಯ ಸುರೇಶ್ ಭಟ್ ಸ್ವಾಗತಿಸಿದರು. ಕೆ.ವಿ.ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು. ಸಾಯಿನಾಥ ಶೆಟ್ಟಿ ವಂದಿಸಿದರು. ಬಳಿಕ ಅರುಣಾ ಉಡುಪ ಬಳಗದಿಂದ ವೈವಿಧ್ಯಮಯ ಕಾರ‍್ಯಕ್ರಮಗಳು ನಡೆದವು.
No comments:
Post a Comment