ಕಟೀಲು : ಅತಿ ಶೀಘ್ರದಲ್ಲಿ ಕಟೀಲು ಕ್ಷೇತ್ರದಿಂದ ಧರ್ಮಸ್ಥಳಕ್ಕೆ ವೈಭವ ಬಸ್ಸು ಹಾಗೂ ಮೂಲ್ಕಿಯಿಂದ ಹೊರಟು ಕಟೀಲಿಗಾಗಿ ಮೂಡುಬಿದ್ರೆ ಬಿಸಿರೋಡು ಮಾರ್ಗವಾಗಿ ಬೆಂಗಳೂರಿಗೆ ರಾಜಹಂಸ ಮತ್ತು ವೋಲ್ವೋ ಬಸ್ಸುಗಳು ಹೊರಡಲಿವೆ ಎಂದು ಕೆಎಸ್‌ಆರ್‌ಟಿಸಿ ಆಡಳಿತ ನಿರ್ದೇಶಕ ಮಂಜುನಾಥ ಪ್ರಸಾದ ತಿಳಿಸಿದ್ದಾರೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಶುಕ್ರವಾರ ಭೇಟಿ ನೀಡಿದ ಸಂದರ್ಭ ಈ ಮಾಹಿತಿ ನೀಡಿದರು. ಅರ್ಚಕ ಹರಿ ಆಸ್ರಣ್ಣ, ಪ್ರಸಾದ ಆಸ್ರಣ್ಣ ಪ್ರಸಾದ ನೀಡಿದರು. ಕೆಎಸ್‌ಆರ್‌ಟಿಸಿ ಅಧಿಕಾರಿಗಳಾದ ಡಿಟಿಒ ಶ್ರೀರಾಂ, ನಾಗರಾಜ ಶಿರಾಲಿ, ಮಹೇಶ್ ಜೊತೆಗಿದ್ದರು.
No comments:
Post a Comment