ಕಟೀಲು : ಮಾತೃಭಾಷೆಯಿಂದ ಮಕ್ಕಳಿಗೆ ಸಂಸ್ಕೃತಿಯನ್ನು ಹೆಚ್ಚು ಅರ್ಥ ಪೂರ್ಣವಾಗಿ ತಿಳಿಸಲು ಸಾಧ್ಯವೆಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರಾದ ಎಂ.ಆರ್.ವಾಸುದೇವ ಹೇಳಿದರು.
ಅವರು ಕಟೀಲು ಶ್ರೀದುರ್ಗಾಪರಮಶ್ವರೀ ದೇವಳದ ಆಶ್ರಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮತ್ತು ವಿಜಯ ಯುವ ಸಂಗಮ ಎಕ್ಕಾರು ಇವರ ಸಂಯೋಜನೆಯಲ್ಲಿ ಕುರಲ್ ಇಷ್ಟೆರ್ ಕುಡ್ಲ ಇವರ ೨೦ನೇ ವರ್ಷಾಚರಣೆಯ ಪ್ರಯುಕ್ತ ಏಳು ದಿನಗಳ ತುಳು ತಾಳಮದ್ದಲೆ ಸ್ಪರ್ದೆ ಉದ್ಘಾಟಿಸಿ ಮಾತನಾಡಿದರು.
ದೇವಳದ ಆಡಳಿತಾಧಿಕಾರಿ ಡಾ.ಹರೀಶ್ ಕುಮಾರ್ ಚೆಂಡೆ ಬಾರಿಸಿ ಸ್ಪರ್ದೆಗೆ ಚಾಲನೆ ನೀಡಿದರು. ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಉಮಾನಾಥ ಕೋಟ್ಯಾನ್, ಬಜ್ಪೆ ವ್ಯವಸಾಯ ಸಹಕಾರಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರತ್ನಾಕರ ಶೆಟ್ಟಿ, ವಿಜಯ ಯುವ ಸಂಗಮದ ಬಾಲಕೃಷ್ಣ ಶೆಟ್ಟಿ, ಬಾಲಕೃಷ್ಣ ಆಚಾರ್ಯ ವೇದಿಕೆಯಲ್ಲಿದ್ದರು.
ಕಟೀಲು ಮಕ್ಕಳ ಮೇಳದ ಬಾಲಕಲಾವಿದರು ತುಳು ಯಕ್ಷಗಾನ ಪದ್ಯದ ಮೂಲಕ ಪ್ರಾರ್ಥನೆ ಹಾಡಿದರು. ಕುರಲ್ ಇಷ್ಟೆರ್ ಕುಡ್ಲ ಅಧ್ಯಕ್ಷ ವಾಮನ ಕರ್ಕೇರ ಕೊಲ್ಲೂರು ಸ್ವಾಗತಿಸಿದರು. ವಿ.ಕೆ.ಯಾದವ್ ಪ್ರಸ್ತಾವಿಸಿದರು. ರಾಮದಾಸ್ ಪಾವಂಜೆ ನಿರೂಪಿಸಿದರು. ನಿತೇಶ್ ವಂದಿಸಿದರು.
No comments:
Post a Comment