Friday, April 13, 2012
ಕಟೀಲಿನಲ್ಲಿ ಸಾಂಸ್ಕೃತಿಕ ಕಾರ‍್ಯಕ್ರಮಗಳು
ಕಟೀಲು : ಕಟೀಲು ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಉತ್ಸವಾಂಗ ದಿನಂಪ್ರತಿ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆಯಲಿವೆ. ತಾ.೧೪ರಂದು ಶ್ರೀನಿವಾಸ ಆಚಾರ್ಯ ಬಳಗ ತೋಕೂರು, ಹಳೆಂಯಗಡಿ ಇವರಿಂದ ಭಜನೆ, ಸಂಜೆ ತಾಳಮದ್ದಲೆ ’ರಾವಣಾಂತರಂಗ’ ಯಕ್ಷ ಸಿಂಧೂರ, ಮಹಿಳಾ ಯಕ್ಷಗಾನ ಕೂಟ, ತಲಪಾಡಿ ಇವರಿಂದ. ತಾ. ೧೫ ಶ್ರೀ ವಾಗ್ದೇವಿ ಭಜನಾ ಮಂಡಳಿ ಕಿನ್ನಿಗೋಳಿಯವರಿಂದ ಭಜನೆ ಸಂಜೆ, ಕು| ದೀಕ್ಷಾ. ಕೆ. ಕೊಟ್ಟಾರ ಇವರಿಂದ ಭರತನಾಟ್ಯ, ತಾ. ೧೬ಕ್ಕೆ ಭಜನೆ ಸಂಗೀತ ಶಾಲೆ, ಕಿನ್ನಿಗೋಳಿ ಮಕ್ಕಳಿಂದ, ಸಂಜೆ ’ಭರತನಾಟ್ಯ’ ಶ್ರೀ ಗುರುದೇವ ಲಲಿತಾ ಕಲಾ ಅಕಾಡೆಮಿ, ಮಂಡ್ಯದವರಿಂದ. ತಾ. ೧೭ ಸಂಜೆ ಬೆಳ್ಳಿ ರಥೋತ್ಸವ ಬೆಳಿಗ್ಗೆ ಶ್ರೀ ಭ್ರಾಮರೀ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ, ಸಂಜೆ ’ರಸಮಂಜರಿ’ ಕರಾವಳಿ ಮೆಲೋಡೀಸ್ ಮಂಗಳೂರು ಇವರಿಂದ ನಡೆಯಲಿದೆ. ತಾ.೧೮ಕ್ಕೆ ಶ್ರೀ ದೇವಿ ಭಜನಾ ಮಂಡಳಿ ಕಟೀಲು ಇವರಿಂದ ಭಜನೆ, ಸಂಜೆ ’ನೃತ್ಯ ಕಾರ್ಯಕ್ರಮ’ ಡ್ಯಾನ್ಸಿಂಗ್ ಸ್ಟಾರ‍್ಸ್ ಅತ್ತಾವರದವರಿಂದ ಇದೆ. ತಾ. ೧೯ರಂದು ಹಗಲು ರಥೋತ್ಸವ ಬೆಳಿಗ್ಗೆ ಭಜನೆ ಬಾಲಗೋಪಾಲ ತಂಡದಿಂದ, ಸಂಜೆ ’ಯಕ್ಷಗಾನ ಪ್ರದರ್ಶನ’ ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ’ಶಿವಭಕ್ತ ವೀರಮಣಿ’ ಪ್ರದರ್ಶನಗೊಳ್ಳಲಿದೆ. ತಾ. ೨೦ರಂದು ದಿನ ಆರಟ ಬೆಳಿಗ್ಗೆ ಭಕ್ತಿ ಗಾಯನ-ಗಜಲ್ ವೈಶಾಲಿ ಪಾಟೀಲ ಮತ್ತು ಬಳಗದವರಿಂದ ಸಂಜೆ ೭.೩೦ರಿಂದ ’ಲೇಸರ್ ಶೋ’ ವಿಜಯಾ ಬ್ಯಾಂಕಿನ ಪ್ರಯೋಜಕತ್ವದಲ್ಲಿ ನಡೆಯಲಿದೆ. ರಾತ್ರಿ ೮.೦೦ರಿಂದ ’ಭೀಷ್ಮನ ಕಡೆತ ದಿನೊಕುಲು’ ನಾಟಕ ಸುಮನಸಾ ಸಾಂಸ್ಕೃತಿಕ ಸೇವಾ ಸಂಘಟನೆ ಕೊಡವೂರು ಇವರಿಂದ ಪ್ರದರ್ಶನಗೊಳ್ಳಲಿದೆ. ರಾತ್ರಿ ೧೦.೦೦ರಿಂದ ತತ್ವಪದ-ಜಾನಪದ ಮಾರಪ್ಪ ಮಾರಪ್ಪ ಚೆನ್ನದಾಸರ ಕೊಪ್ಪಳ ಇವರಿಂದ ಕನ್ನಡ ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಜರಗಲಿದೆ.
Subscribe to:
Post Comments (Atom)
No comments:
Post a Comment