ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆ ಸುವರ್ಣ ಮಹೋತ್ಸವದ ಸಿದ್ಧತೆಯಲ್ಲಿದ್ದು ಈ ಹಿನ್ನಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಭೆ ನಡೆಯಿತು.
ಶಾಲೆಯಿಂದ ಈ ವರೆಗೆ ಹನ್ನೆರಡು ಸಾವಿರ ಮಂದಿ ಎಸ್‌ಎಸ್‌ಎಲ್‌ಸಿ ಮುಗಿಸಿದ್ದು, ಅವರಲ್ಲಿ ಕನಿಷ್ಟ ಐದು ಸಾವಿರ ಮಂದಿಯನ್ನಾದರೂ ಒಟ್ಟು ಸೇರಿಸುವ ಕಾರ‍್ಯವಾಗಬೇಕು ಎಂದು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು. ವಿದ್ಯಾರ್ಥಿಗಳ ಕಲಿಕೆಗೆ ಕಂಪ್ಯೂಟರ್‌ಗಳನ್ನು ನೀಡುವುದು ಹಾಗೂ ಕಟೀಲು ಶಿಕ್ಷಣ ಸಂಸ್ಥೆಗಳ ವೆಬ್‌ಸೈಟ್ ಮಾಡುವ ಬಗ್ಗೆ ತಿಳಿಸಲಾಯಿತು.
ಉಪಪ್ರಾಚಾರ‍್ಯ ಸುರೇಶ್ ಭಟ್, ಶಿಕ್ಷಕರಾದ ಸಾಯಿನಾಥ ಶೆಟ್ಟಿ, ಕೆ.ವಿ.ಶೆಟ್ಟಿ, ಹಳೆ ವಿದ್ಯಾರ್ಥಿಗಳಾದ ಪ್ರದ್ಯಮ್ನ ರಾವ್, ಮಧುಕರ ಅಮೀನ್, ಅರುಣಾ ಉಡುಪ, ಸುಧಾಕರ ಶೆಟ್ಟಿ, ರಾಮ್‌ಗೋಪಾಲ್, ಗುರುರಾಜ ಉಡುಪ ಮುಂತಾದವರು ಅಭಿಪ್ರಾಯ ವ್ಯಕ್ತಪಡಿಸಿದರು.
No comments:
Post a Comment