
ಅವರು ಗುರುವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ವಿವಿ ಮಟ್ಟದ ಯಕ್ಷಗಾನ ಸ್ಪರ್ಧೆಗಳಲ್ಲಿ ವಿಜೇತವಾದ ಕಾಲೇಜಿನ ಯಕ್ಷಗಾನ ತಂಡದ ಸದಸ್ಯರನ್ನು, ಕ್ರೀಡಾ ಸಾಧಕ ವಿದ್ಯಾರ್ಥಿಗಳನ್ನು, ಎಂಬಿಎಯಲ್ಲಿ ೭ನೇ ರ್‍ಯಾಂಕ್ ಪಡೆದ ಉಪನ್ಯಾಸಕ ವಿಜಯ್‌ರನ್ನು ಸಂಮಾನಿಸಲಾಯಿತು.
ದೇಗುಲದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಶಿಕ್ಷಕ ರಕ್ಷಕ ಸಂಘದ ಕೊಡೆತ್ತೂರು ವೇದವ್ಯಾಸ ಉಡುಪ, ವಿದ್ಯಾರ್ಥಿ ನಾಯಕರಾದ ವಿಷ್ಣುಪ್ರಸಾದ್, ವಿಶ್ವೇಶ, ತುಷಾರ್, ಪ್ರಣೀತಾ ಮತ್ತಿತರರಿದ್ದರು. ಉಪನ್ಯಾಸಕ ಸುರೇಶ್ ಸ್ವಾಗತಿಸಿದರು. ಪ್ರಾಚಾರ್‍ಯ ಎಂ. ಬಾಲಕೃಷ್ಣ ಶೆಟ್ಟಿ ಪ್ರಸ್ತಾವನೆಗೈದರು. ಸೋಂದಾ ಭಾಸ್ಕರ ಭಟ್ ವಂದಿಸಿದರು. ಪರಮೇಶ್ವರ ಸಿ.ಎಚ್. ಕಾರ್‍ಯಕ್ರಮ ನಿರೂಪಿಸಿದರು.
No comments:
Post a Comment