Saturday, December 27, 2014

ಕಟೀಲು ದೇವಳ ಶಿಕ್ಷಣ ಸಂಸ್ಥೆಗಳ ವಿದ್ಯಾ ಸಂಭ್ರಮ ಉದ್ಘಾಟನೆ

ಮತಬೇಧವಿಲ್ಲದ ದೇಗುಲದಲ್ಲಿ ಮಕ್ಕಳೆಂಬ ದೇವರ ನಿರ್ಮಾಣ- ಫಲಿಮಾರು ಸ್ವಾಮೀಜಿ
ಕಟೀಲು : ಕಟೀಲಿನಲ್ಲಿ ಎರಡು ದೇಗುಲಗಳು. ಒಂದು ಅರ್ಚಕರು ಆರಾಧಿಸುವ ಕಟೀಲು ದೇವಿಯ ದೇಗುಲ. ಮತ್ತೊಂದು ಮಕ್ಕಳೆಂಬ ದೇವರನ್ನು ನಿರ್ಮಿಸುವ ಮತಬೇಧವಿಲ್ಲದ ವಿದ್ಯಾ ದೇಗುಲ ಎಂದು ಕಟೀಲು ಶಾಲೆಯ ಹಳೆ ವಿದ್ಯಾರ್ಥಿ, ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದರು.
ಅವರು ಶನಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಶಿಕ್ಷಣ ಸಂಸ್ಥೆಗಳ ವಿದ್ಯಾ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದೇ ಸಂದರ್ಭ ವಿದ್ಯಾ ಸದನ ಸಭಾಭವನ, ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಸವಿನೆನಪಿನ ಸುವರ್ಣ ಸೌಧದ ಕಛೇರಿ ಕೊಠಡಿ, ಕಂಪ್ಯೂಟರ್ ಕೇಂದ್ರಗಳ ಉದ್ಘಾಟನೆ ಹಾಗೂ ವಿಜ್ಞಾನ ವಿಭಾಗದ ಎರಡನೇ ಮಹಡಿ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಯುವ ಸಬಲೀಕರಣ ಕ್ರೀಡೆ ಮತ್ತು ಮೀನುಗಾರಿಕಾ ರಾಜ್ಯ ಸಚಿವ ಅಭಯಚಂದ್ರ ಜೈನ್, ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹಾಗೂ ಸಾಂಸದ ನಳಿನ್ ಕುಮಾರ್ ಉದ್ಘಾಟನೆಗಳನ್ನು ನೆರವೇರಿಸಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಸಭಾಭವನಕ್ಕೆ ರೂ.೩ಲಕ್ಷ ಅನುದಾನ ನೀಡುವುದಾಗಿ ಹೇಳಿದರು.
ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ, ಕಟೀಲು ದೇವಳ ಆಡಳಿತಾಧಿಕಾರಿ ನಿಂಗಯ್ಯ, ಜಿಲ್ಲಾ ಪಂ. ಸದಸ್ಯ ಈಶ್ವರ ಕಟೀಲು, ತಾ.ಪಂ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಮೆನ್ನಬೆಟ್ಟು ಗ್ರಾ.ಪಂ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಬಜಪೆ ಸ್ವಯಂಭೂಲಿಂಗೇಶ್ವರ ದೇವಳ ಆಡಳಿತ ಮೊಕ್ತೇಸರ ಎಲ್.ವಿ.ಅಮೀನ್ ಮುಂಬೈ, ಉದ್ಯಮಿಗಳಾದ ಬಿ. ಟಿ. ಬಂಗೇರ, ಕೃಷ್ಣ ಭಟ್ ತಿರುಪತಿ, ಸಂತೋಷ್ ಕುಮಾರ್ ಶೆಟ್ಟಿ, ಯದುನಾರಾಯಣ ಶೆಟ್ಟಿ, ಎಮ್. ಗಫೂರ್, ಕಟೀಲು ದೇವಳ ಪ್ರೌಢ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅನಂತಪದ್ಮನಾಭ ಆಸ್ರಣ್ಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ, ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟರಮಣ ಹೆಗ್ಡೆ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಮಧುಕರ ಅಮೀನ್, ಕಟೀಲು ದೇವಳ ಪದವಿ ಕಾಲೇಜು ಪ್ರಿನ್ಸ್‌ಪಾಲ್ ಎಮ್. ಬಾಲಕೃಷ್ಣ ಶೆಟ್ಟಿ, ಕಟೀಲು ದೇವಳ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ವಾಸುದೇವ ಶೆಣೈ ಉಪಸ್ಥಿತರಿದ್ದರು.
ಕಟೀಲು ದೇವಳ ಪದವಿ ಪೂರ್ವ ಕಾಲೇಜು ಪ್ರಾಚಾರ‍್ಯ ಜಯರಾಮ ಪೂಂಜಾ ಸ್ವಾಗತಿಸಿದರು, ಕಟೀಲು ದೇವಳ ಪ್ರೌಢ ಶಾಲಾ ಉಪಪ್ರಾಚಾರ‍್ಯ ಕೆ.ವಿ.ಶೆಟ್ಟಿ ಪ್ರಸ್ತಾವನೆಗೈದರು. ಪ್ರೌಢ ಶಾಲಾ ಶಿಕ್ಷಕರಾದ ಸಾಯಿನಾಥ ಶೆಟ್ಟಿ ಮತ್ತು ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆದವು.



ಇಂದು(ತಾ.೨೮) ಕಟೀಲು ಪ್ರೌಢಶಾಲೆಯ ಸುವರ್ಣ ಮಹೋತ್ಸವ ನಡೆಯಲಿದೆ.

Friday, December 26, 2014

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಿದ್ಯಾಸಂಸ್ಥೆಗಳ ವಿದ್ಯಾ ಸಂಭ್ರಮ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಿದ್ಯಾಸಂಸ್ಥೆಗಳ ವಿದ್ಯಾ ಸಂಭ್ರಮವು ದಿನಾಂಕ 27-12-2014 ಶನಿವಾರದಿಂದ ದಿನಾಂಕ 2-1-2015 ರ ಶುಕ್ರವಾರದವರೆಗೆ ನಡೆಯಲಿದೆ.
ದಿನಾಂಕ ೨೭-೧೨-೨೦೧೪ ಶನಿವಾರ ಬೆಳಗ್ಗೆ ಶಾಲೆಯ ಹಳೆವಿದ್ಯಾರ್ಥಿ, ಶ್ರೀ ಫಲಿಮಾರು ಮಠ ಶ್ರೀ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ವಿದ್ಯಾ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಚಿವರಾದ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ಪ್ರೌಢಶಾಲೆಯ ಸುವರ್ಣಸೌಧದ ಕಛೇರಿ ಕೊಠಡಿಯನ್ನು ಸಚಿವರಾದ ಬಿ. ರಮಾನಾಥ ರೈ ಉದ್ಘಾಟಿಸಲಿದ್ದು, ಪದವೀಪೂರ್ವ ಕಾಲೇಜಿನ ವಿಜ್ಞಾನ ವಿಭಾಗ ಕಟ್ಟಡದ ೨ನೇ ಮಹಡಿ ನಿರ್ಮಾಣಕ್ಕೆ ಚಾಲನೆಯನ್ನು ಐವನ್ ಡಿ’ಸೋಜ ನೀಡಲಿದ್ದಾರೆ. 
ಸುವರ್ಣಸೌಧ ಕಂಪ್ಯೂಟರ್ ವಿಭಾಗದ ಉದ್ಘಾಟನೆಯನ್ನು ಸಾಂಸದ ನಳಿನ್‌ಕುಮಾರ್ ಕಟೀಲ್ ನೆರವೇರಿಸಲಿದ್ದು, ಶ್ರೀವಿದ್ಯಾ ಸದನ ಸಭಾಂಗಣವನ್ನು ಶ್ರೀ ಆಸ್ಕರ್ ಫೆರ್ನಾಂಡಿಸ್ ಉದ್ಘಾಟಿಸಲಿದ್ದಾರೆ. 
ತಾ. ೨೮ರಂದು ಪ್ರೌಢಶಾಲೆಯ ಸುವರ್ಣ ಮಹೋತ್ಸವ ಸಮಾರೋಪದಲ್ಲಿ ಅಭಯಚಂದ್ರ ಜೈನ್, ಯು.ಟಿ.ಖಾದರ್, ಮೊಯ್ದಿನ್ ಬಾವಾ, ನಳಿನ್ ಕುಮಾರ್, ಡಾ.ಸುರೇಂದ್ರ ವಿ.ಶೆಟ್ಟಿ, ಡಾ.ಸುರೇಶ್ ರಾವ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
ತಾ.೨೯ರಂದು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನ ತ್ರಿಂಶದುತ್ಸವ ನಡೆಯಲಿದ್ದು, ಅಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ, ಹರೇಕಳ ಹಾಜಬ್ಬ, ಹರಿಕೃಷ್ಣ ಪುನರೂರು ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ. ತಾ.೩೦ರಂದು ತ್ರಿಂಶದುತ್ಸವ ಸಮಾರೋಪದಲ್ಲಿ ಅಭಯಚಂದ್ರ ಜೈನ್, ಜೆ.ಆರ್.ಲೋಬೋ, ವಸಂತ ಬಂಗೇರ, ನಳಿನ್ ಕುಮಾರ್, ಅಮರನಾಥ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ.
ತಾ. ೩೦ರಂದು ಹಿರಿಯ ಪ್ರಾಥಮಿಕ ಶಾಲೆಯ ೯೮ನೇ ವಾರ್ಷಿಕೋತ್ಸವದ ಸಂದರ್ಭ ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಶಾರದಾ ಸದನದ ಉದ್ಘಾಟನೆ ಮಾಡಲಿದ್ದು, ಅಭಯಚಂದ್ರ ಜೈನ್, ನಳಿನ್ ಕುಮಾರ್, ಮಾಜಿ ಶಾಸಕ ವಿಜಯಕುಮಾರ ಶೆಟ್ಟಿ, ಎಕ್ಕಾರು ಮೋನಪ್ಪ ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ.
ಜನವರಿ ೧ರಂದು ಪ್ರಥಮ ದರ್ಜೆ ಕಾಲೇಜಿನ ರಜತ ಮಹೋತ್ಸವ ನಡೆಯಲಿದ್ದು, ಈ ನೆನಪಿನ ಕಟ್ಟಡಕ್ಕೆ ನಿಟ್ಟೆ ವಿನಯ ಹೆಗ್ಡೆ ಶಿಲಾನ್ಯಾಸಗೈಯಲಿದ್ದಾರೆ. ಅಭಯಚಂದ್ರ ಜೈನ್, ಗಣೇಶ್ ಕಾರ್ಣಿಕ್, ನಳಿನ್ ಕುಮಾರ್, ಕೃಷ್ಣ ಜೆ.ಪಾಲೇಮಾರ್, ಮಂಗಳೂರು ವಿವಿ ಕುಲಸಚಿವರಾದ ಪಿ.ಎಸ್.ಎಡಪಡಿತ್ತಾಯ, ಎಂ.ಬಿ.ಪುರಾಣಿಕ್, ಅಜಿತ್‌ಕುಮಾರ ರೈ ಮಾಲಾಡಿ, ಪ್ರದೀಪಕುಮಾರ ಕಲ್ಕೂರ ಮುಂತಾದವರು ಭಾಗವಹಿಸಲಿದ್ದಾರೆ.
ತಾ. ೨ರಂದು ಕಟೀಲು ದೇಗುಲದ ಎಲ್ಲ ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿಗಳ ಸಂಗಮೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಅಂದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಹಳೆವಿದ್ಯಾರ್ಥಿಗಳನ್ನು ಸಚಿವ ವಿನಯಕುಮಾರ ಸೊರಕೆ ಅಭಿನಂದಿಸಲಿದ್ದು, ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ವಿದ್ಯಾಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎಲ್ಲ ಶಿಕ್ಷಕರನ್ನು ಗೌರವಿಸಲಿದ್ದಾರೆ. ಅಭಯಚಂದ್ರ ಜೈನ್, ನಳಿನ್ ಕುಮಾರ್, ಡಾ.ಮೋಹನ ಆಳ್ವ, ಎ.ಸದಾನಂದ ಶೆಟ್ಟಿ, ಡಾ.ಗಣನಾಥ ಎಕ್ಕಾರು ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ. 
ದಿನಂಪ್ರತಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ.


ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲವು ಪ್ರಾಥಮಿಕದಿಂದ ಸಂಸ್ಕೃತ ಸ್ನಾತಕೋತ್ತರ ಪದವಿ ಶಿಕ್ಷಣದವರೆಗೆ ವಿದ್ಯಾಲಯಗಳನ್ನು ನಡೆಸುತ್ತಿದೆ.
ಸಂಸ್ಕೃತ ಸ್ನಾತಕೋತ್ತರ ಅಧ್ಯಯನಕ್ಕಾಗಿರುವ ಶ್ರೀ ದುರ್ಗಾ ಸಂಸ್ಕೃತ ಅಧ್ಯಯನ ಮತ್ತು ಸಂಶೋಧನ ಕೇಂದ್ರವು ಮಂಗಳೂರು ವಿವಿಯ ಏಕೈಕ ಕೇಂದ್ರವಾಗಿದ್ದು, ವಿದ್ಯಾರ್ಥಿಗಳಿಗೆ ಉಚಿತ ಊಟ ವಸತಿ ವ್ಯವಸ್ಥೆಯಿದೆ.
ಕಟೀಲು ಶಿಕ್ಷಣ ಸಂಸ್ಥೆಗಳಲ್ಲಿ ಈವರೆಗೆ ಸುಮಾರು ಐವತ್ತು ಸಾವಿರದಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆಗೈದಿದ್ದು, ಪ್ರಸ್ತುತ ೨೫೦೦ ವಿದ್ಯಾರ್ಥಿಗಳು ವ್ಯಾಸಂಗ ನಿರತರಾಗಿದ್ದಾರೆ. ಎಲ್ಲ ವಿದ್ಯಾಸಂಸ್ಥೆಗಳಲ್ಲಿ ದೇಣಿಗೆ ರಹಿತ ಶಿಕ್ಷಣ ನೀಡಲಾಗುತ್ತಿದೆ. ಕನ್ನಡ ಮಾಧ್ಯಮದ ಪ್ರೌಢಶಾಲೆಗಳಲ್ಲಿ ರಾಜ್ಯದಲ್ಲಿ ಅತ್ಯಂತ ಹೆಚ್ಚು ವಿದ್ಯಾರ್ಥಿಗಳನ್ನೊಳಗೊಂಡಿರುವ ದಾಖಲೆ ಕಟೀಲು ಪ್ರೌಢಶಾಲೆಯದ್ದು. 
ಎಲ್ಲ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ, ಕಂಪ್ಯೂಟರ್ ಶಿಕ್ಷಣದಂತಹ ಸವಲತ್ತುಗಳನ್ನೂ ಒದಗಿಸಲಾಗುತ್ತಿದೆ. ದೇಗುಲವು ಶಿಕ್ಷಣಕ್ಕಾಗಿ ಕಳೆದ ವರ್ಷ ರೂ.೨.೭೧ಕೋಟಿಗಳಷ್ಟನ್ನು ಖರ್ಚು ಮಾಡಿದೆ. ದೇಗುಲದ ವಿದ್ಯಾದಾನಕ್ಕೆ ದೇಣಿಗೆ ನೀಡಿದ್ದಲ್ಲಿ ಆದಾಯ ತೆರಿಗೆ ಕಾಯಿದೆಯ ೮೦ ಜಿ. ತೆರಿಗೆ ವಿನಾಯಿತಿ ಇದೆ.
ಕಟೀಲು ದೇಗುಲವು ಊಟ, ಆಟಗಳಂತೆ ಪಾಠಕ್ಕೆ ಪ್ರಸಿದ್ಧಿ ಹೊಂದಿದ್ದು, ಜಿಲ್ಲೆಯ ವಿವಿಧ ವಿಶೇಷ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಖರ್ಚನ್ನು ಭರಿಸುತ್ತಿದೆ.

Sunday, December 14, 2014

ಯಕ್ಷಗಾನ ವಾಚಿಕ ಸಮಾರಾಧನೆ, ದೃಶ್ಯಾವಳೀ ಕೃತಿಗಳ ಬಿಡುಗಡೆ

ಕಟೀಲು : ಯಕ್ಷಗಾನ ಕಲಾವಿದರು ಅಧ್ಯಯನಾಸಕ್ತರಾಗಬೇಕಾದ ಅಗತ್ಯವಿದೆ ಎಂದು ಖ್ಯಾತ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಸರಸ್ವತಿ ಸದನದಲ್ಲಿ ಯಕ್ಷಗಾನ ಕಲಾವಿದ ಲೇಖಕ ರವಿಶಂಕರ್ ವಳಕ್ಕುಂಜ ರಚಿತ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ವಿಮರ್ಶಕ ಡಾ. ಎಂ. ಪ್ರಭಾಕರ ಜೋಷಿ ಕೃತಿಗಳ ಬಗ್ಗೆ ಮಾತನಾಡಿದರು.
ವಳಕ್ಕುಂಜರ ಯಕ್ಷಗಾನ ಪ್ರಸಂಗ ದ್ಯಶಾವಳೀ ಕೃತಿಯನ್ನು ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ ಹಾಗೂ ಯಕ್ಷಗಾನ ವಾಚಿಕ ಸಮಾರಾಧನೆ ಕೃತಿಯನ್ನು ಪಳ್ಳತ್ತಡ್ಕ ಪರಮೇಶ್ವರ ಭಟ್ಟ ಬಿಡುಗಡೆಗೊಳಿಸಿದರು. ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್, ಕಟೀಲು ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ , ಕಮಲಾದೇವಿ ಪ್ರಸಾದ ಆಸ್ರಣ್ಣ , ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಹಿರಣ್ಯ ವೇಕಟೇಶ್ ಭಟ್ಟ ಉಪಸ್ಥಿರಿದ್ದರು.
ಕೃತಿಕಾರ ರವಿಶಂಕರ ವಳಕ್ಕುಂಜ ಸ್ವಾಗತಿಸಿ, ವಾಸುದೇವರಂಗಾ ಭಟ್ ಹಾಗೂ ರಾಮಜೋಯಿಸ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.

ಕಟೀಲು ಪದವಿ ಪೂರ್ವ ಕಾಲೇಜು ಸಮಗ್ರ ತಂಡ ಪ್ರಶಸ್ತಿ


೨೫ನೇ ವರ್ಷದ ಸಂಭ್ರಮದಲ್ಲಿರುವ ಅಖಿಲ ಭಾರತ ತುಳು ಒಕ್ಕೂಟ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಜಂಟಿ ಆಶ್ರಯದಲ್ಲಿ ಅಡ್ಯಾರ್ ಸಾಹಿತ್ಯ ಕಾಲೇಜಿನಲ್ಲಿ ನಡೆದ ವಿಶ್ವ ತುಳುವೆರ ಪರ್ಬ ೨೦೧೪ ಇದರ ಅಂಗವಾಗಿ
ಅಂತರ ಕಾಲೇಜು ಕಲಾ ಪಂಥ ಸಹ್ಯಾದ್ರಿ ತುಳುವೆರ ಐಸಿರಿ ಸಾಂಸ್ಕೃತಿಕ ಕಾರ್ಯಕ್ರಮ ಸ್ಪರ್ಧೆಯಲ್ಲಿ ಕಟೀಲು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಮಗ್ರ ತಂಡ ಪ್ರಶಸ್ತಿ, ಉತ್ತಮ ಕಾರ್ಯಕ್ರಮ ನಿರೂಪಣೆ ಹಾಗೂ ಶಿಸ್ತು ಬದ್ಧ ತಂಡ ಪ್ರಶಸ್ತಿ ಪಡೆದುಕೊಂಡಿದೆ.

Sunday, November 30, 2014

ಕಟೀಲು ಯಕ್ಷಗಾನ ಮಂಡಳಿ ಡಿಸೆಂಬರ್ ೨೦೧೪ ತಿರುಗಾಟದ ವಿವರಗಳು

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
೨೦೧೪-೧೫ನೇ ಸಾಲಿನ ತಿರುಗಾಟದ ವಿವರಗಳು
ಡಿಸೆಂಬರ್ ೨೦೧೪
೦೧.೧೨.೨೦೧೪  ರುಕ್ಕಯ ಪೂಜಾರಿ ಮತ್ತು ಮಕ್ಕಳು, ಉಮ್ಮೆಟ್ಟು, ಮಲ್ಲಿಗೆ ಅಂಗಡಿ
 ಕೇಶವ ಪೂಜಾರಿ, ಸಂಕೇತ ನಿಲಯ, ಪಡುಕೋಡಿ, ಕೂಳೂರು  ಕಟೀಲು ಕ್ಷೇತ್ರದಲ್ಲಿ
 ಸದಾಶಿವ ಶೆಟ್ಟಿ ತಾರಿಕರಿಯ ಮನೆ, ಗುರುಪುರ - ಪೊರ್ಕೋಡಿ ದೇವಸ್ಥಾನದ ವಠಾರದಲ್ಲಿ
 ಕಮಲಾ ಸಾಲ್ಯಾನ್ ಚೆನ್ನರ ಪಾದೆ, ಮಳಲಿ
 ಮುಲ್ಕಾಜೆಮಾಡ ಹತ್ತು ಸಮಸ್ತರು-ಮಣಿನಾಲ್ಕೂರು
 ಗಿರಿಜಾ ಶೆಟ್ಟಿ ಮತ್ತು ಮಕ್ಕಳು ಬಾಕ್ಯಾರಕೋಡಿ ಹೌಸ್, ಮಿಜಾರು ಬಡಗ ಎಡಪದವು
೦೨.೧೨.೨೦೧೪  ಅಪ್ಪು ಜಿ.ಕೋಟ್ಯಾನ್ ಮತ್ತು ಮಕ್ಕಳು, ಕೋಟ್ಯಾರು ಮನೆ, ಪಡುಬಿದ್ರಿ
 ಮುತ್ತಪ್ಪ ಆರ್.ಶೆಟ್ಟಿ, ಮುತ್ತೊಟ್ಟು, ಚಂದ್ರಮಂಡಲ, ಮೆನ್ನಬೆಟ್ಟು
 ಚಂದ್ರಶೇಖರ ಶೆಟ್ಟಿ, ಬಾಳಗುತ್ತು, ಕವತ್ತಾರು  ಗಿಡಿಗೆರೆ ಶ್ರೀ ನಿಕೇತನದಲ್ಲಿ
 ಯಕ್ಷ ಸಂಗಮ ತುಳುವೆರ ಕೂಟ(ರಿ)ಎಡ್ತೂರಪದವು
 ತಿರುಮಲೇಶ, ಚಂದ್ರಿಕ ಸಿದ್ದಕಟ್ಟೆ  ಕಟೀಲು ಕ್ಷೇತ್ರದಲ್ಲಿ
 ಪ್ರಕಾಶ್ ಜೈನ್, ಪಚ್ಚನಾಡಿ ಮನೆ, ಅಳದಂಗಡಿ ದೇವಸ್ಥಾನದ ವಠಾರದಲ್ಲಿ
೦೩.೧೨.೨೦೧೪  ಸೇಸಮ್ಮ S.ಕೋಟ್ಯಾನ್, ಶ್ರೀನಿವಾಸ ನಗರ, ಸುರತ್ಕಲ್  ಕಟೀಲು ಗೋಪಾಲಕೃಖಿ ಆಸ್ರಣ್ಣ ಸಭಾಭವನ
 ದೇವಪ್ಪ ನೋಟಗಾರ್, ಕುಂಜತ್ತಬೈಲು  ಕಾವೂರು ದೇವಸ್ಥಾನದಲ್ಲಿ
 ಯಜಮಾನ ಮಂಜಣ್ಣ ಯಾನೆ ಮನೋಹರ ಶೆಟ್ಟಿ, ಕುಲಶೇಖರ
 ನಾರಾಯಣ ಭಟ್, ಶಂಕರಗಿರಿ ಮನೆ  ಕಟೀಲು ಕ್ಷೇತ್ರದಲ್ಲಿ
 ಡಾ| ಲಕ್ಷ್ಮೀ ಹೆಗ್ಡೆ, ಡಾ| ರಾಕೇಶ್ ಹೆಗ್ಡೆ ಮತ್ತು ಮಕ್ಕಳು, ಕಡಂದಲೆ
 ಸತ್ಯಪ್ರಕಾಶ್ ಶೆಟ್ಟಿ, ಕಟ್ಟೆಮಾರು ಹೌಸ್, ಬಡಗಬೆಳ್ಳೂರು
೦೪.೧೨.೨೦೧೪  ಭೋಜ ಸಫಲಿಗ ಕಾಂತರಕೋಡಿ  ಕತ್ತಲ್‌ಸಾರ್ ಶಾಲಾ ಬಳಿ
 ಶಶಿಕಲಾ ಎಸ್.ಸಾಲ್ಯಾನ್, ಶ್ರೀ ದೇವಿ ಕೃಪಾ, ೩ನೇ ಬ್ಲಾಕ್,ಕಾಟಿಪಳ್ಳ, ಸುರತ್ಕಲ್
 ಅವಿನಾಶ್ ಶೆಟ್ಟಿ, ಕಿಲ್ಲೂರು ಲಕ್ಕೆ, ಪಾವೂರು  ಕಟೀಲು ಕ್ಷೇತ್ರದಲ್ಲಿ
 ಸುಬೋದ್ ಮೇಂಡ, ಸರಕಾರಿ ಜೂನಿಯರ್ ಕಾಲೇಜು ಬಳಿ, ಗುರುಪುರ
 ದಿನೇಶ್ ಶೆಟ್ಟಿ ವಾಸುಕೀ ನಿಲಯ, ಕುಚ್ಚೂರು, ಕಾಸ್ಬೆಟ್ಟು, ಹೆಬ್ರಿ
 ವಿಮಲಾ ರಾಮಣ್ಣ ಸಪ್ತಗಿರಿ, ಜಕ್ರಿ ಬೆಟ್ಟು, ಬಂಟ್ವಾಳ
೦೫.೧೨.೨೦೧೪  ಮೋಹನ್ ಶೆಟ್ಟಿ, ಮೊಗರು ಮನೆ, ಮಳಲಿ  ಕಟೀಲು ಕ್ಷೇತ್ರದಲ್ಲಿ
 ಬಾಬು ಆರ್.ಶೆಟ್ಟಿ, ಸಹೋದರ,ಸಹೋದರಿಯರು, ಕುತ್ತೆತ್ತೂರು, ಕೇಂಜ
 ಕಿನ್ನಿಗೋಳಿ ಭಟ್ರಕೋಡಿ ಹತ್ತು ಸಮಸ್ತರು, ಪೆಟ್ರೋಲ್ ಪಂಪ್ ಬಳಿ
 ಜಿ.ಎಂ. ಶ್ರೀನಿವಾಸ ಶೆಟ್ಟಿ, ಅರೆಹಳ್ಳಿ ಬೇಲೂರು  ಕಟೀಲು ಬಸ್ಟೇಂಡ್ ಬಳಿ
 ಜಯರಾಮ ಬನಾನ್, ಜೋಡುಕಟ್ಟೆ, ಕಾರ್ಕಳ
 ಶ್ರೀ ಚಂಡಿಕಾಯಾಗ ಸೇವಾ ಸಮಿತಿ, ಕಾರ್ಮಿಕ ಕಾಲನಿ, ಶಕ್ತಿನಗರ, ಮಂಗಳೂರು
೦೬.೧೨.೨೦೧೪  ವಿಶ್ವನಾಥ ಶೆಟ್ಟಿ, ಶೆಡ್ಡೆ ಹೊಸಲಕ್ಕೆ ಮನೆ, ಮೂಡುಶೆಡ್ಡೆ
 ಶ್ರೀ ವಿನಾಯಕ ಮಿತ್ರ ಬಳಗ, ಕೊಡಿಯಾಲ್‌ಬೈಲ್ - ಪಿ.ವಿ.ಎಸ್.ಬಳಿ
 ಗಣೇಶ್ ಟೈಲ್ ವರ್ಕ್ಸ್, ಕೈಕಂಬ, ಗುರುಪುರ
 ಬಾಬು ಪೂಜಾರಿ, ಅಡ್ವೆ, ನಂದಿಕೂರು
 ಪುಣಿಕೋಡಿ ಪ್ರಕಾಶ್ ಬೀಡಿ ಕಾರ್ಮಿಕರು ಮತ್ತು ಹತ್ತು ಸಮಸ್ತರು ಸಾದೂರು ಅಡ್ಡೂರು
 ಗುರುಪುರ ಕುಕ್ಕುದಕಟ್ಟೆ ಹತ್ತು ಸಮಸ್ತರು ಗುರುಪುರ ಕುಕ್ಕುದಕಟ್ಟೆ
೦೭.೧೨.೨೦೧೪  ಬೊಂಡಾಲ ಶಾಲಾ ಬಳಿ ಹತ್ತು ಸಮಸ್ತರು
 ಲಲಿತ ಶೆಟ್ಟಿ, ಅಜಾರು ಹೊಸಮನೆ ಅಜಾರು  ಕಟೀಲು ಕ್ಷೇತ್ರದಲ್ಲಿ
 ಶಾರದಾ ಭಂಡಾರಿ, ಜೋಡುಕಟ್ಟೆ, ಕಾರ್ಕಳ  ಕಟೀಲು ಗೋಪಾಲಕೃಖಿ ಆಸ್ರಣ್ಣ ಸಭಾಭವನದಲ್ಲಿ
 ನೇಮಿರಾಜ, ಮಾಂಜ ಹೌಸ್  ಕಟೀಲು ಮಾಂಜದಲ್ಲಿ
 ಮಾರಿಯಮ್ಮ ಯುವಕ ಸಂಘ, ಸೇರ್ಕಲ, ಬಂಟ್ವಾಳ
 ಗಿರೀಶ್ ಶೆಣೈ, ಮಹಾಲಸಾಗಣೇಶ್‌ದರ್ಶನ್, ಕಡಂದಲೆ ಪಲ್ಕೆ
೦೮.೧೨.೨೦೧೪  ಪ್ರಸನ್ನ ಕುಮಾರ್ ಕೆ.ಆರ್., ಕೀರ್ತನ್ ಡೆವಲಪರ‍್ಸ್, ಬೊಳುವಾರು,ಪುತ್ತೂರು
 ತಿಮ್ಮಪ್ಪ ಪೂಜಾರಿ ಮತ್ತು ಮಕ್ಕಳು ಕಾಂಜಿರಕೋಡಿ, ಬಂಟ್ವಾಳ
 ಗಿರೀಶ್ ಶೆಟ್ಟಿ, ಶ್ರೀ ನಿವಾಸಅಜಾರು, ಕಟೀಲು-ಅಜಾರಿನಲ್ಲಿ
 ಗಣೇಶ ಬಿ.ಸೆಟ್ಟಿಗಾರ್ ತಡಂಬೈಲ್,ಸುರತ್ಕಲ್  ಕಟೀಲು ಗೋಪಾಲಕೃಖಿ ಆಸ್ರಣ್ಣ ಸಭಾಭವನದಲ್ಲಿ
 ರೇವತಿ ವಿ.ಶೆಟ್ಟಿ ಕೆಳಗಿನ ಮಾಲೇವು, ದುರ್ಗಾನಗರ ಎಕ್ಕಾರು
 ಕುಶಲ ಶೆಟ್ಟಿ ಮತ್ತು ಮಕ್ಕಳು, ಕುಟುಂಬಿಕರು, ಕುಶಲ ಸಭಾಭವನ ಬಳಿ ಕಳತ್ತೂರು
೦೯.೧೨.೨೦೧೪  ಜಗನ್ನಾಥ ಶೆಟ್ಟಿ, ಬಜದಗುತ್ತು, ಕೈಕಾರ ಒಳಮೊಗ್ರು, ಪುತ್ತೂರು
 ಶ್ಯಾಮಸುಂದರ ಭಂಡಾರಿ,ರತ್ನ ಕೃಪಾಕೋಟ  ಗಿಡಿಗೆರೆ ಶ್ರೀ ನಿಕೇತನದಲ್ಲಿ
 ನವೀನ್ ಕುಮಾರ್, ನೀರ್‌ಮಾರ್ಗ, ಪೆದಮಲೆ
 ಶ್ರೀಧರ ಆಚಾರ್ಯ, ಕೆರೆಕಾಡು, ಮುಲ್ಕಿ
 ಡಾ| ಚಂದ್ರಪ್ರಭ, ಪ್ರಾಥಮಿಕ ಆರೋಗ್ಯ ಕೇಂದ್ರ,,ಕಟೀಲು  ಕಟೀಲು ಕ್ಷೇತ್ರದಲ್ಲಿ
 ರಮೇಶ್‌ರಾವ್, ರಕ್ತೇಶ್ವರೀ ದೇವಸ್ಥಾನ, ಕಾಳಿಂಗರಾವ್ ರಸ್ತೆ, ಸಾಸ್ತಾನ
೧೦.೧೨.೨೦೧೪  ಗೀತಾ ಗಂಗಾಧರ ಆಚಾರ್ಯ,ಪರ್ಲಡ್ಕ, ಪುತ್ತೂರು ಪುರುಖಿರ ಕಟ್ಟೆಯಲ್ಲಿ
 ಸುರೇಶ್ ಶೆಟ್ಟಿ ಸಂಕಯ್ಯ ಬೆನ್ನಿ, ಕೊಡೆತ್ತೂರು
 ಚಂದ್ರಹಾಸ ಶೆಟ್ಟಿ ಮೇಗಿನ ಮನೆ, ಮಳಲಿ
 ದೇವೇಂದ್ರ ಮೂಡುಮಲೆ, ಮೂಡುಬೆಟ್ಟು, ಕುಳಾಯಿ
 ಶ್ರೀಮತಿ ವೆಂಕಮ್ಮ ಹೊಸಮನೆ, ಗಿಡಿಗೆರೆ ಚರ್ಚ್ ಬಳಿ
 ಗುರುರಾಜ ರಾವ್, ಬ್ರಾಹ್ಮಣರ ಬೆಟ್ಟು, ವಡ್ಡರ್ಸೆ
೧೧.೧೨.೨೦೧೪  ಲಕ್ಷ್ಮೀಶ ಹೆಬ್ಬಾರ್, ಕಾರಿಜ ಮನೆ, ಕೆಮ್ಮಿಂಜೆ, ಪುತ್ತೂರು
 ಶ್ರೀಮತಿ ಅಪ್ಪಿ ಆಚಾರ‍್ತಿ, ಕೆಮ್ಮಣ್ಣು ದರ್ಖಾಸು ಮನೆ, ನಿಟ್ಟೆ, ಕಾರ್ಕಳ
 ರಾಜೇಂದ್ರ ಆಳ್ವ, ಅಮೃತೇಶ್ವರಿ, ಅಳಕೆ ಮನೆ, ಗಂಜಿಮಠ
 ಯತೀಶ್ ಕುಮಾರ್ ಶೆಟ್ಟಿ, ಉಪ್ಪಿನಂಗಡಿ  ಕಟೀಲು ಕ್ಷೇತ್ರದಲ್ಲಿ
 ವಿಶ್ವನಾಥ ಕೈಕುಂಜೆ, ಬಂಟ್ವಾಳ
 ಶಾರದ ಪೂಜಾರ‍್ತಿ ಮತ್ತು ಮಕ್ಕಳು, ಕುಟುಂಬಿಕರು, ಪಾರಂಪಳ್ಳಿ, ಸಾಲಿಗ್ರಾಮ
೧೨.೧೨.೨೦೧೪  ಮಹಾಬಲ ರೈ, ರಾಮಮಜಲು ಗುತ್ತು, ಪುತ್ತೂರು ರಾಮಕುಂಜದಲ್ಲಿ
 ವಿಠಲ ಶೆಟ್ಟಿ, ಮೂಡಾಯೂರು, ಮೊಡಂತ್ಯಾರು ಪಾರೆಂಕಿ ದೇವಸ್ಥಾನದ ಬಳಿ
 ಗಣೇಶ್ ಶೆಟ್ಟಿ ಕಲ್ಲೋಡಿ, ಕೊಳಂಬೆ  ಕಟೀಲು ಕ್ಷೇತ್ರದಲ್ಲಿ
 ವಿಶ್ವನಾಥ ಇರುವೈಲು, ಮೂಡುಬಿದ್ರೆ
 ಸುರೇಶ್ ಶೆಟ್ಟಿ ಅಳಕೆ, ಮೂಡುಪೆರಾರ
 ಉಮಾ ಲಕ್ಷ್ಮೀಶ ಉಪಾಧ್ಯಾಯ, ಕೆ.ಎಂ.ಸಿ.ಬಳಿ ಅತ್ತಾವರ - ಪಾವಂಜೆ ದೇವಳ ಬಾಕಿಮಾರು ಗದ್ದೆಯಲ್ಲಿ
೧೩.೧೨.೨೦೧೪  ಕರಿಯಂಗಳ ಹತ್ತು ಸಮಸ್ತರು, ಉದಯ ಫ್ರೆಂಡ್ಸ್ ಕ್ಲಬ್, ಕರಿಯಂಗಳ
 ಶ್ರೀ ದುರ್ಗಾಪರಮೇಶ್ವರೀ ಸೇವಾಸಮಿತಿ, ಉರ್ವಸ್ಟೋರ್
 ಉಜ್ಜೋಡಿ ಗೋರಿಗುಡ್ಡೆ ಹತ್ತು ಸಮಸ್ತರು, ಗೋರಿಗುಡ್ಡೆ, ಕಂಕನಾಡಿ
 ರವಿಶಂಕರ್ ಭಟ್ ವಳಕುಂಜ, ಹಾಸ್ಯಗಾರ್  ಕಟೀಲು ಕ್ಷೇತ್ರದಲ್ಲಿ
 ಸುಧೀರ್ ನಾಕ್, ಗಣೇಶ್ ಪ್ರಸಾದ್, ಗಂಜಿ ಮಠ
 ಕೃಖಿಪುರ ಬೊಳ್ಳಾಜೆ ಹತ್ತು ಸಮಸ್ತರು
೧೪.೧೨.೨೦೧೪  ಕೃಖಿ ಗೌಡ ಮತ್ತು ಕುಟುಂಬಿಕರು ಮೂಡಲಬೆಟ್ಟು, ಮೂಡು ಪೆರಾರ
 ದಿ|ಶಾಲಿನಿ ಸ್ಮರಣಾರ್ಥ ಸುನಿಲ್, ಗಂಜಿಮಠ, ಮೂಡುಪೆರಾರ ಚರ್ಚ್ ಬಳಿ
 ಚಂದ್ರಹಾಸ ಪೂಜಾರಿ, ಮಜಲು ಮನೆ, ಕುಳಾಯಿ ಗುತ್ತಿನ ಬಳಿ
 ಸಂತೋಖಿ ಶೆಟ್ಟಿ ಮುನಿಯಾಲ್, ಕಾರ್ಕಳ
 ರಾಜು ಶೆಟ್ಟಿ, ಪಂಜ ಮನೆ, ಕುಳವೂರು ಕುಪ್ಪೆಪದವು
 ಸುನಂದ ಚಂದ್ರಹಾಸ ಶೆಟ್ಟಿ, ಐಕಳ ಬಾವ  ಕಟೀಲು ಕ್ಷೇತ್ರದಲ್ಲಿ
೧೫.೧೨.೨೦೧೪  ದಯಾನಂದ ಮುಚ್ಚೂರು, ನಿಡ್ಡೋಡಿ
 ಶ್ರೀಕಾಂತ ಉಡುಪ, ದರ್ಬಾರ್ ಗುಡ್ಡೆ, ಮಂಗಳೂರು  ಕಟೀಲು ಕ್ಷೇತ್ರದಲ್ಲಿ
 ಎನ್.ವೆಂಕಟರಾಯ ಆಚಾರ್ಯ ನೀರುಮಾರ್ಗ, ಪೆದಮಲೆ, ಸುಬ್ರಹ್ಮಣ್ಯ ಭಜನಾ ಮಂದಿರ ಬಳಿ
 ಭವಾನಿ ಶಂಕರ, ಶ್ರೀ ನಿವಾಸ ಆದಿಮಾಯೆ ಕಂಪೌಂಡು, ಮೂಡು ಪೆರಾರ
 ಕೋರ‍್ದಬ್ಬು ದೈವಸ್ಥಾನ ಸಮಿತಿ ಹತ್ತು ಸಮಸ್ತರು ಇರುವೈಲು, ವಾಮಂಜೂರು
 ರಮಾನಂದ ಶೆಟ್ಟಿ,ಕುತ್ತೆತ್ತೂರು ವಯಾ ಕಾಟಿಪಳ್ಳ
೧೬.೧೨.೨೦೧೪  ಪೂವಮ್ಮ ಬೆಳ್ಚಡ್ತಿ, ಗುಡ್ಡೆ ಮನೆ ಅತ್ತೂರು ಪಕ್ಷಿಕೆರೆ
 ರಮೇಶ ವಿ.ಶೆಟ್ಟಿ ಕುಬೆವೂರು ಹೊಸಮನೆ, ಕೆಂಚನಕೆರೆ ವಯಾ ಮೂಲ್ಕಿ
 ಅಲ್ಲಿಪಾದೆ ಹತ್ತು ಸಮಸ್ತರು, ಶ್ರೀರಾಮ ಭಜನಾ ಮಂಡಳಿ ಬಳಿ
 ಸಿದ್ದಕಟ್ಟೆ ಹತ್ತು ಸಮಸ್ತರು
 ಅಮಿತ್ ಶೆಟ್ಟಿ, ಸಜಿಪ ಮೂಡ, ಬಂಟ್ವಾಳ
 ಎರ್ಮಾಳು ಶ್ರೀ ಜನಾರ್ಧನ ದೇವಸ್ಥಾನ, ಎರ್ಮಾಳು
೧೭.೧೨.೨೦೧೪  ಹೇಮಾವತಿ ಕರುಣಾಕರ ಶೆಟ್ಟಿ ರಾಮನಗರ ಕೆಂಚನಕೆರೆ
 ಸುಧೀರ್ ಪಿ.ಶೆಟ್ಟಿ, ಪಾಲೆಮಾರು ಗುತ್ತು, ಮಾಲಾಡಿ ಕೋರ್ಟ್ಸ್, ಕಾವೂರು
 ಶ್ರೀ ವೈದ್ಯನಾಥೇಶ್ವರ ವಿಖಿಮೂರ್ತಿ ದೇವಸ್ಥಾನ, ಕೊಕ್ಕಡ
 ಸುಶೀಲ ವಿಠಲ ಶೆಟ್ಟಿ  ಕಟೀಲು ಕ್ಷೇತ್ರದಲ್ಲಿ
 ಪೂವಪ್ಪ ಬಂಗೇರ, ತಣ್ಣೀರು ಪಂಥ, ಬೆಳ್ತಂಗಡಿ
 ರತ್ನಾಕರ ಹೆಗ್ಡೆ, ಉಚ್ಚಿಲ, ಕಾಪು
೧೮.೧೨.೨೦೧೪  ವಾಸು ಶೆಟ್ಟಿ, ಶ್ರೀದೇವಿ ಕೃಪಾ, ೭ನೇ ಬ್ಲಾಕ್, ಕೃಖಿಪುರ, ಸುರತ್ಕಲ್
 ಪುಖಿ ಶೆಟ್ಟಿ, ಪೇಜಾವರ ವಯಾ ಪೊರ್ಕೋಡಿ
 ದಿ| ಲಿಂಗಣ್ಣ ಶೆಟ್ಟಿ ಸ್ಮರಣಾರ್ಥ ಮಕ್ಕಳು ತಿರುವಾಲೆ, ಇರಾ
 ಗುರುಪಾದ ಹೆಗ್ಡೆ ಮಾಣಿ  ಕದ್ರಿ ಕ್ಷೇತ್ರದ ವಠಾರದಲ್ಲಿ
 ಶೀಲಾ ಶೆಟ್ಟಿ ಶೆಡ್ಡೆ, ಪಸಲಕ್ಕೆ ಮೂಡುಶೆಡ್ಡೆ ಕಟೀಲು ಕ್ಷೇತ್ರದಲ್ಲಿ
 ಗಿರಿಜ ಜೋಗಿ ಮತ್ತು ಸಹೋದರ ಸಹೋದರಿಯರು, ಮೂರುಕಾವೇರಿ, ಕಿನ್ನಿಗೋಳಿ
೧೯.೧೨.೨೦೧೪  ವಿಕಾಸ್ ಪುತ್ರನ್, ಉಚ್ಚಿಲ, ಕಾಪು  ಕಟೀಲು ಕ್ಷೇತ್ರದಲ್ಲಿ
 ದೂಜ ಸೆಟ್ಟಿಗಾರ್, ಪುರಂದರ ಸೆಟ್ಟಿಗಾರ್ ಗೋಳಿಜಾರ
 ನವೀನ್ ಶೆಟ್ಟಿ, ಬಂಗಬೆಟ್ಟು, ಮಿಜಾರು
 ವೀರಮ್ಮ ಪೂಜಾರ‍್ತಿ, ಲಕ್ಷ್ಮೀನಿವಾಸ, ಕೊಕುಡೆ, ಹಳೆಯಂಗಡಿ
 ಭಾಸ್ಕರ ಕೋಟ್ಯಾನ್, ಕೊಳಕೆ ಇರ್ವತ್ತೂರು, ಮೂಡು ಮಾರ್ನಾಡು ವಯಾ ಬೆಳುವಾಯಿ
 ಸುಂದರಿ ಗೋಪಾಲ ಶೆಟ್ಟಿ, ಕೊಡೆತ್ತೂರು ದೇವಸ್ಯ, ಬಲವಿನಗುಡ್ಡೆ
೨೦.೧೨.೨೦೧೪  ಬಾಬು ದೇವಾಡಿಗ, ನಡ್ಡೋಡಿ, ಬಡಗ ಎಡಪದವು
 ಶ್ರೀಮತಿ ಉಖಿ ರಘುರಾಮ ಶೆಟ್ಟಿ ಮತ್ತು ಮಕ್ಕಳು, ಹಿರ್ಗಾನ, ಕಡಂಬಗುತ್ತು ಕಾರ್ಕಳ
 ಇಂದಿರಾ ಮತ್ತು ಸಂಜೀವ ಶೆಟ್ಟಿ ಕಣಂಜಾರು, ಕೊಳಕೆ ಬೈಲು, ಕಾರ್ಕಳ
 ತೆಂಕು ಉಳಿಪಾಡಿ ಮಳಲಿ ಹತ್ತು ಸಮಸ್ತರು  ಮಳಲಿ
 ಗುಂಡಳಿಕೆ ನಾಗರಿಕಾ ಸೇವಾ ಸಮಿತಿ(ರಿ) ಗುಂಡಳಿಕೆ
 ಸಬೀತಾ ಎಲ್.ರೈ ಮತ್ತು ಮಕ್ಕಳು ಕಯ್ಯಾರ ಬೈಲು, ಕುಂಜತ್ತಬೈಲು
೨೧.೧೨.೨೦೧೪  ಸುನೀತಾ ಜಗನ್ನಾಥ ಶೆಟ್ಟಿ, ಪಟ್ಟೆ, ಮಾಗಂದಡಿ
 ರಿಷಿಕಾ ಶೆಟ್ಟಿ ಮತ್ತು ಮಿಥುನ್ ಶೆಟ್ಟಿ, ಮುಂಬೈ  ಕಟೀಲು ಕ್ಷೇತ್ರದಲ್ಲಿ
 ಪ್ರವೀಣ್ ಆಳ್ವ, ಕದ್ರಿ  ಕದ್ರಿ ಕ್ಷೇತ್ರದಲ್ಲಿ
 ವನಮಾಲ ಕನ್ನಡಿಗರ ಬೆಟ್ಟು, ಕಾರ್ನಾಡು ವರಪ್ರಭ, ಮೂಲ್ಕಿ ಕಾರ್ನಾಡಿನಲ್ಲಿ
 ಶ್ರೀಮತಿ ರಾಜೀವಿ ಕೃಖಿ ಮೇಲಂಟ ಮತ್ತು ಮನೆಯವರು, ಕಾವೂರುಗುತ್ತು ಮನೆ ವಠಾರದಲ್ಲಿ
 ಕಿನ್ನಿಗೋಳಿ ಪದ್ಮನೂರು ಹತ್ತು ಸಮಸ್ತರು, ೧೩ನೇ ಮೈಲುಕಲ್ಲಿನ ಬಳಿ
೨೨.೧೨.೨೦೧೪  ಯತೀಶ್ ಕೆ. ಎಸ್.ಕೆ. ನಿವಾಸ, ಸಾರಸ್ವತ ಕಾಲನಿ, ಕೋಟೆಕಾರು
 ಪವನೀಶ್ ಇಡ್ಯ,ಕಟ್ಲ, ಸುರತ್ಕಲ್
 ಬಾಲಕೃಖಿ ಪೂಂಜ ಮದ್ದಡ್ಕ, ಬೆಳ್ತಂಗಡಿ
 ನಿತೀಶ್ ಶೆಟ್ಟಿ, ಒಂಟಿಕಟ್ಟೆ ಮೂಡುಬಿದ್ರಿ
 ಶಂಕರ್ ವಿ.ಶೆಟ್ಟಿ ಹೊಸಮನೆ, ಸಂಕಲಕರಿಯ  ಕಟೀಲು ಕ್ಷೇತ್ರದಲ್ಲಿ
 ಸೀತಾರಾಮ ಶೆಟ್ಟಿ, ತೋಕೂರು ದೇವಸ್ಥಾನದ ಬಳಿ
೨೩.೧೨.೨೦೧೪  ದಿ| ಸುಂದರಿ ಜೋಗಿಯವರ ಸ್ಮರಣಾರ್ಥ ಮಕ್ಕಳು ಪೊರ್ಕೋಡಿ ದೇವಸ್ಥಾನದ ಬಳಿ
 ಗಿರಿಜಾ ಶೆಡ್ತಿ ಮತ್ತು ಕಾತ್ಯಾಯಿನಿ ಶೆಡ್ತಿ ಮೇಗಿನ ಕುದ್ರಾಡಿಗುತ್ತು ಹೌಸ್, ಕೊಟ್ಟಾರ ಚೌಕಿ
 ಗಂಗಯ್ಯ ಶೆಟ್ಟಿ ಮತ್ತು ಮಕ್ಕಳು ಗೇರುಕಟ್ಟೆ ವಯಾ ಗುರುವಾಯನಕೆರೆ
 ಕಮಲ ನೇಮಯ್ಯ ಸೆಟ್ಟಿಗಾರ್, ಶ್ರೀ ಮಾರುತಿ ಪ್ರಸಾದ್, ಮಿತ್ತಪನೆ, ಸಾಣೂರು
 ವೇದವ್ಯಾಸರಾವ್, ಬಾಳೆರಾಮ ಮನೆ, ಬೀಡಿನಕೆರೆ ಶಾಲಾ ಬಳಿ, ಪಡುಬಿದ್ರಿ
 ಶ್ರೀಮತಿ ಮಿಥಾಲಿ ಶೆಟ್ಟಿ ಮತ್ತು ರಿತೇಶ್ ಶೆಟ್ಟಿ, ಮುಂಬೈ  ಕಟೀಲು ಕ್ಷೇತ್ರದಲ್ಲಿ
೨೪.೧೨.೨೦೧೪  ಉಮೇಶ್ ಶೆಟ್ಟಿ ಶಿಬರೂರು ಗುತ್ತು ಮನೆ- ದೇಲಂತಬೆಟ್ಟು
 ಚಂದ್ರಶೇಖರ ಭಂಡಾರಿ (ಪಾತ್ರಾಡಿಗುತ್ತು)  ಕದ್ರಿ ಕ್ಷೇತ್ರದಲ್ಲಿ
 ಶ್ರೀಮತಿ ಸುಗಂಧಿ ಎಸ್.ಶೆಟ್ಟಿ ಗೇರುಕಟ್ಟೆ, ಶಕ್ತಿ ಸದನ
 ಸುಂದರ ಶೆಟ್ಟಿ, ಪಡೀಲ್ ಗಾರ್ಡನ್  ಕಟೀಲು ಕ್ಷೇತ್ರದಲ್ಲಿ
 ತಾಳಿಪಾಡಿಗುತ್ತು ದಿ|ನಾರಾಯಣ ಶೆಟ್ಟಿ, ಗುಲಾಬಿ ಶೆಡ್ತಿ ಸ್ಮರಣಾರ್ಥ ಮಕ್ಕಳು,ನಂದಿನಿತಾಳಿಪಾಡಿ
 ದಿ|ತುಕ್ರ ಭಂಡಾರಿ ಸ್ಮರಣಾರ್ಥ ಮಕ್ಕಳ ಸೇವೆ, ಶ್ರೀನಿವಾಸ ನಗರ, ಸುರತ್ಕಲ್
೨೫.೧೨.೨೦೧೪  ದಿ| ಸುಂದರ ಶೆಟ್ರ ಸ್ಮರಣಾರ್ಥ ಪತ್ನಿ ಮಕ್ಕಳು, ಚಿಕ್ಕಿ ನಿವಾಸ, ಬಾಳ  ಕಟೀಲು ಕ್ಷೇತ್ರದಲ್ಲಿ
 ಚಂದ್ರಪ್ರಸಾದ್ ಶೆಟ್ಟಿ, ಫಣಿಯೂರು ಗುತ್ತು ವಯಾ ಉಚ್ಚಿಲ
 ಗಂಗಾಧರ ಅಮೀನ್, ನಾಸಿಕ್- ಶ್ರೀ ಗೋಕರ್ಣನಾಥ ದೇವಸ್ಥಾನ ಕುದ್ರೋಳಿಯಲ್ಲಿ
 ಯೋಗೀಶ್ ಎನ್.ಶೆಟ್ಟಿ, ಲಕ್ಷ್ಮೀನಾರಾಯಣ ಕೃಪಾ, ಕಾಡ್ಯಡ್ಕ, ಅಶ್ವತ್ಥಪುರ
 ರಾಯರ ಕೋಡಿ ಕುಟುಂಬಸ್ಥರು, ಕಂದಾವರ ವಯಾ ಕಿನ್ನಿಕಂಬಳ
 ರಾಘವೇಂದ್ರ ಭಟ್, ಜ್ಞಾನೇಶ್ವರಿ, ತೆಂಕಬೆಟ್ಟು, ಉಪ್ಪೂರು, ಉಡುಪಿ
೨೬.೧೨.೨೦೧೪  ಎನ್.ಎ.ಪದ್ಮನಾಭ ವರಕಳ ಮನೆ, ಪಡುಪೆರಾರ, ಅಂಬಿಕಾನಗರ, ಸುಂಕದಕಟ್ಟೆಯಲ್ಲಿ
 ಸದಾನಂದ ಶೆಟ್ಟಿ ಮತ್ತು ಮಕ್ಕಳು ಕೊಡಿಪಾಡಿ, ಮದ್ಯ, ಸುರತ್ಕಲ್
 ರಘುರಾಮ ಶೆಟ್ಟಿ ಬೆಳ್ಮ ಬೋರ್ಯ ಮನೆ, ಹೇರಳಕಟ್ಟೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ
 ವಿಶ್ವನಾಥ ಶೆಟ್ಟಿ ಅಂಧೇರಿ, ಮುಂಬೈ  ಕಟೀಲು ಕ್ಷೇತ್ರದಲ್ಲಿ
 ರಘುರಾಮ ಶೆಟ್ಟಿ, ರಾಧಾಕೃಖಿ ನಿವಾಸ,ಕಿಲೆಂಜೂರು, ನಡುಗೋಡು
 ಪಂಜ ಕೊಕುಡೆ ಹತ್ತು ಸಮಸ್ತರು, ಕುಮಾರಗೋಳಿಯಲ್ಲಿ
೨೭.೧೨.೨೦೧೪  ರತ್ನಾಕರ ಅಡ್ಯಂತಾಯ ಬಾಂಗಾವು,ಶಿಬರೂರು
 ಕಿನ್ನಿಗೋಳಿ ಕಂಬಳದ ಬಾಬ್ತು ಹತ್ತು ಸಮಸ್ತರು, ರಾಜರತ್ನಪುರ
 ಶಂಕರಶೆಟ್ಟಿ ಸೊರ್ಕಳಗುತ್ತು, ಐಕಳ ಕಿನ್ನಿಗೋಳಿ
 ಬಿ.ಆರ್ ಶೆಟ್ಟಿ, ಗುರು ಛಾಯ, ವಳಕಾಡು, ಉಡುಪಿ ಅಮ್ಮಣ್ಣಿ ರಾಮಣ್ಣ ಹಾಲ್ ಮೈದಾನ
 ದಿ|ಗಂಗಾಧರ ರೈ ಬೋಳಂತೂರುಗುತ್ತು ಸ್ಮರಣಾರ್ಥ ಪತ್ನಿ, ಮಕ್ಕಳು, ಬೊಳಂತೂರು
 ಪಕ್ಷಿಕೆರೆ ಹತ್ತು ಸಮಸ್ತರು
೨೮.೧೨.೨೦೧೪  ಆನಂದ ಶೆಟ್ಟಿ, ನಿತ್ಯಾನಂದ ನಿವಾಸ, ಸಾಣೂರು
 ಮೂಡು ಪೆರಾರ ಹತ್ತು ಸಮಸ್ತರು
 ಸಂದೀಪ್ ಶೆಟ್ಟಿ ಕೆಂಜಾರು, ಮರವೂರು
 ದಿ| ಸೀತಾ ಸಿದ್ದು ಶೆಟ್ಟಿ ಕುಟುಂಬಿಕರು, ಸೀತಾ ಸದನ ಕೆದಿಂಜೆ ಬೆಳ್ಮಣ್
 ಸಚಿನ್ ಶೆಟ್ಟಿ, ದುರ್ಗಾ ನಿಲಯ ವಾಮಂಜೂರು ದೇವಸ್ಥಾನದ ಬಳಿ
 ರಾಜೇಶ್ ಶೆಟ್ಟಿ, ಬೊರಿವಿಲಿ, ಮುಂಬೈ  ಕಟೀಲು ಕ್ಷೇತ್ರದಲ್ಲಿ
೨೯.೧೨.೨೦೧೪  ಶಾಂತ ವಿ.ಶೆಟ್ಟಿ, ಇನ್ನದ ಗುತ್ತು, ಇನ್ನ ದೇವಸ್ಥಾನದ ಬಳಿ
 ಭಾಸ್ಕರ ಸಾಲಿಯಾನ್, ಕೈಕುಂಜೆ, ಬಿ.ಸಿ.ರೋಡ್, ಬಂಟ್ವಾಳ
 ಪುರುಖಿತ್ತಮ ಶೆಟ್ಟಿ, ಭ್ರಾಮರಿ ಪ್ರಸಾದ್, ಕೊಡೆತ್ತೂರು, ಕಿನ್ನಿಗೋಳಿ
 ಮಹಾಬಲ ಶೆಟ್ಟಿ, ಶ್ರೀನಿಧಿ, ಮುಂಡ್ಕೂರು ದೊಡ್ಡಮನೆ  ಮುಂಡ್ಕೂರಿನಲ್ಲಿ
 ಸತೀಶ ಶೆಟ್ಟಿ, ಮರವೂರು ಬೀಡು, ಮರವೂರು
 ವಿಜಯ ಕುಮಾರ್ ಅಮೀನ್, ಕೋಡಿಕೆರೆ, ಕುಳಾಯಿ
೩೦.೧೨.೨೦೧೪  ಸರೋಜಿನಿ ಶೆಟ್ಟಿ, ತಿದ್ಯ, ಮುಂಡಬೆಟ್ಟು, ಪೆರಾರ  ಕಟೀಲು ಕ್ಷೇತ್ರದಲ್ಲಿ
 ರಾಮಮಂದಿರ ಕೆದಂಬಾಡಿ, ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ
 ನಯನ ಪಾಲ ಶೆಟ್ಟಿ ಮತ್ತು ಸಹೋದರರು, ಕುದ್ರಿಪದವು ಜಂಕ್ಷನ್‌ನಲ್ಲಿ
 ಗೋಪಾಲ ಶೆಟ್ಟಿ, ಪುಣ್ಕೆದಡಿ, ಬಾಜಾವು, ಕುತ್ತೆತ್ತೂರು
 ಮಕ್ಕಿ ಹತ್ತು ಸಮಸ್ತರು, ಶಿರ್ತಾಡಿ ಹೈಸ್ಕೂಲು ಬಳಿ
 ಪಟ್ಟೆ ಮಾಗಂದಡಿ ಜಾರಂದಾಯ ದೈವಸ್ಥಾನದ ಬಳಿ ಹತ್ತು ಸಮಸ್ತರು
೩೧.೧೨.೨೦೧೪  ಆನಂದ ಶೆಟ್ಟಿ, ಕಣಂದೂರು ವಯಾ ಮುಡಿಪು
 ಜಗದೀಶ ಶೆಟ್ಟಿ, ನೆಲ್ಲಿಕಟ್ಟೆ, ಕೃಖಿನಗರ ಶಾಲಾ ಬಳಿ, ಪುತ್ತೂರು
 ಪ್ರಕಾಶ್ ಶೆಟ್ಟಿ, ಶಿರ್ವ, ಮಂಚಕಲ್
 ದಿ| ರಾಮಮೂರ್ತಿ ಬೆಂಗಳೂರು ಸ್ಮರಣಾರ್ಥ ಮಕ್ಕಳ ಸೇವೆ, ಚೇಳಾಯರು ಕಾಲನಿ ಶಾಲಾ ಬಳಿ
 ಉಗ್ಗೆಮಾರು ದಿ| ದೇಜು ಶೆಟ್ರ ಸ್ಮರಣಾರ್ಥ ಪತ್ನಿ ಮತ್ತು ಮಕ್ಕಳು  ಕಟೀಲು ಕ್ಷೇತ್ರದಲ್ಲಿ
 ವಿಶ್ವನಾಥ ಶೆಟ್ಟಿ, ಜೆಪ್ಪಿನಮೊಗರು, ಮಂಗಳೂರು

Sunday, November 23, 2014

ಲೋಕಾಯುಕ್ತ ಭಾಸ್ಕರ ರಾವ್

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಶುಕ್ರವಾರ ಲೋಕಾಯುಕ್ತ ಭಾಸ್ಕರ ರಾವ್, ಲೋಕಾಯುಕ್ತ ರಿಜಿಸ್ಟ್ರಾರ್ ಎಚ್.ಆರ್.ದೇಶಪಾಂಡೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಅರ್ಚಕ ಅನಂತ ಆಸ್ರಣ್ಣ ಸ್ವಾಗತಿಸಿದರು
.

katil nandini river swachate

katil nandini river swachate

Tuesday, November 11, 2014

ದೀಪೋತ್ಸವ 2014



ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಮಂಗಳವಾರ ದೀಪೋತ್ಸವ ನಡೆಯಿತು. ಹಣ್ಣು, ತರಕಾರಿಗಳ ಮಂಟಪದಲ್ಲಿ (ಗುರ್ಜಿ) ದೇವರನ್ನು ಕುಳ್ಳಿರಿಸಿ ಪೂಜೆ ನಡೆಯಿತು.


Friday, November 7, 2014

ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳ ಕಲಾ ಪರ್ವ

ಕಟೀಲು ದುರ್ಗಾ ಮಕ್ಕಳ ಮೇಳದ ಕಲಾಪರ್ವ ಸಮಾರೋಪ

ಮಕ್ಕಳಲ್ಲಿ ಯಕ್ಷಗಾನದ ಮೂಲಕ ಸಂಸ್ಕಾರ ಶ್ಲಾಘನೀಯ- ದಯಾನಂದ ರೆಡ್ಡಿ

ಕಟೀಲು : ಕಲಾಮಾತೆ ದೇವಿಯ ಹೆಸರಿನಲ್ಲಿ ಯಕ್ಷಗಾನದ ಮೂಲಕ ಸಂಸ್ಕೃತಿ 
ಮತ್ತು ಕಲೆಯನ್ನು ಮಕ್ಕಳಲ್ಲಿ ಬೆಳೆಸುತ್ತ ಸಂಸ್ಕಾರ ತುಂಬುವ ಕಾರ‍್ಯ ಮಹತ್ತರವಾದುದು 
ಎಂದು ವಿಧಾನ ಪರಿಷತ್ ಸದಸ್ಯ ದಯಾನಂದ ರೆಡ್ಡಿ ಹೇಳಿದರು.
ಅವರು ಭಾನುವಾರ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ 
ಆರನೆಯ ವರ್ಷದ ಕಲಾಪರ್ವದಲ್ಲಿ ಮಾತನಾಡಿದರು.
ಖ್ಯಾತ ಕಲಾವಿದ ರೆಂಜಾಳ ರಾಮಕೃಷ್ಣ ರಾವ್‌ರನ್ನು ಹತ್ತು ಸಾವಿರ ರೂ. ನಗದು 
ಸಹಿತ ಸಮ್ಮಾನಿಸಲಾಯಿತು. ಯಕ್ಷಗಾನ ಸಾಧಕರಾದ 
ಮಧೂರು ವೆಂಕಟಕೃಷ್ಣ ಹಾಗೂ ವಿಶ್ವೇಶ ರಾವ್‌ರನ್ನು ಗೌರವಿಸಲಾಯಿತು. 
ಯಕ್ಷಗಾನ ಶಿಕ್ಷಕರಾದ ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿ ಬೈಪಾಡಿತ್ತಾಯ, 
ರಾಜೇಶ್ ಐ.ಕಟೀಲುರನ್ನು ಅಭಿನಂದಿಸಲಾಯಿತು. ಮೇಳದ ಪ್ರತಿಭಾನ್ವಿತರನ್ನು ಪುರಸ್ಕರಿಸಲಾಯಿತು.
ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, 
ಅನಂತಪದ್ಮನಾಭ ಆಸ್ರಣ್ಣ, ಉದ್ಯಮಿ ಚಂದ್ರಹಾಸ ರೈ ಬೊಳ್ನಾಡುಗುತ್ತು, 
ಅಗರಿ ಸಂಸ್ಥೆಗಳ ಅಗರಿ ರಾಘವೇಂದ್ರ ರಾವ್, ಪೆರಾರ ಬಾಬು ಎಸ್.ಶೆಟ್ಟಿ, 
ಬಜಪೆ ವ್ಯವಸಾಯ ಬ್ಯಾಂಕಿನ ಎಕ್ಕಾರು ರತ್ನಾಕರ ಶೆಟ್ಟಿ, ಮುಂಬೈನ ಸುವರ್ಣಬಾಬಾ, 
ಪೆರ್ಮುದೆ ಭುಜಂಗ ಶೆಟ್ಟಿ, ಕಸಾಪದ ಪ್ರದೀಪಕುಮಾರ ಕಲ್ಕೂರ, 
ಕಟೀಲು ಮೇಳಗಳ ಸಂಚಾಲಕ ಕೆ.ದೇವೀಪ್ರಸಾದ ಶೆಟ್ಟಿ, ಪಂಜ ಭಾಸ್ಕರ ಭಟ್, 
ಬೆಂಗಳೂರು ರಾಜೇಶ ಶೆಟ್ಟಿ, ಐಕಳ ಮಹಾಬಲ ಶೆಟ್ಟಿ, 
ತೀಯಾ ಸಮಾಜದ ಚಂದ್ರಶೇಖರ ಬೆಳ್ಚಡ, 
ಬೆಹರಿನ್ ರಕ್ಷಣಾ ಇಲಾಖೆಯ ರುಕ್ಮಯದಾಸ್, ನಮ್ಮ ಕುಡ್ಲದ ಲೀಲಾಕ್ಷ ಕರ್ಕೇರ, 
ಉಪಪ್ರಾಚಾರ್ಯ ಕೆ.ವಿ.ಶೆಟ್ಟಿ, ಮುಖ್ಯ ಶಿಕ್ಷಕಿ ಮಾಲತಿ ವೈ ಮತ್ತಿತರರಿದ್ದರು. 
ಮಕ್ಕಳ ಮೇಳದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. 
ಕಾರ್ಯದರ್ಶಿ ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಮೂರು ದಿನಗಳ ಕಾಲ ೧೪ ಮಕ್ಕಳ ತಂಡಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು. 
ಒಟ್ಟು ೧೦೨ಗಂಡು ಮಕ್ಕಳು ಹಾಗೂ ೮೬ಹೆಣ್ಣು ಮಕ್ಕಳು ವೇಷ ಧರಿಸಿ 
ಕಟೀಲಿನ ಕಲಾಪರ್ವದಲ್ಲಿ ಭಾಗವಹಿಸಿದ್ದು, ಮೂರು ಮಕ್ಕಳ ತಂಡಗಳಿಗೆ 
ಮಹಿಳೆಯರೇ ನಿರ್ದೇಶನ ಮಾಡಿದ್ದು ವಿಶೇಷವಾಗಿತ್ತು.
(ಸುರತ್ಕಲ್ ವಿದ್ಯಾದಾಯಿನಿ ತಂಡಕ್ಕೆ ಪೂರ್ಣಿಮಾ, ಕಳಸ ತಂಡಕ್ಕೆ ಜ್ಯೋತಿ ಟಿ.ಎನ್. 
ಹಾಗೂ ಪೊರ್ಕೊಡಿ ತಂಡಕ್ಕೆ ಲಕ್ಷ್ಮೀ).  ಸಭಾ ಕಾರ‍್ಯಕ್ರಮದ 
ಬಳಿಕ ದುರ್ಗಾಮಕ್ಕಳ ಮೇಳದ ಕಲಾವಿದರಿಂದ ದಕ್ಷಾಧ್ವರ ಪ್ರದರ್ಶನಗೊಂಡಿತು.




ಕಟೀಲು : ಯಕ್ಷಗಾನ ಕಲೆಯ ಮಹತ್ವ, ಸಾರವನ್ನು ಕಲಾವಿದರು ಹಾಗೂ ಕಲಾ ಸಂಘಟಕರು 
ಹೆಚ್ಚಿಸಿದಾಗ  ಕಲೆ ಉಳಿಯುತ್ತದೆ ಎಂದು ಕಟೀಲು ದೇವಳ ಅರ್ಚಕ ವೆಂಕಟರಮಣ ಆಸ್ರಣ್ಣ ಹೇಳಿದರು. 
ಕಟೀಲು ಸರಸ್ವತಿ ಸದನದಲ್ಲಿ ಶುಕ್ರವಾರ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಮೂರು ದಿನಗಳ ಕಾಲದ
ವಾರ್ಷಿಕ ಕಲಾ ಪರ್ವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಟೀಲು ದೇವಳ
ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ, ಮಂಗಳೂರು ದುರ್ಗಾ ಫೆಸಿಲಿಟಿ ಸಂಸ್ಥೆಯ
 ನಿರ್ದೇಶಕ ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಪೆರ್ಮುದೆ ಸೋಮನಾಥೇಶ್ವರ ದೇವಸ್ಥಾನದ
ಮೊಕ್ತೇಸರ ಶೇಖರ ಶೆಟ್ಟಿ, ಬಿ.ಕೆ ಸಂದೀಪ್, ಉದ್ಯಮಿಗಳಾದ ಬಾಬು ಎನ್. ಶೆಟ್ಟಿ,
ಕಿನ್ನಿಗೋಳಿ ಬಿ.ಡಿ. ರಾಮಚಂದ್ರ ಆಚಾರ್ಯ, ನಿಲೇಶ್ ಶೆಟ್ಟಿಗಾರ್,
ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು 
ಶ್ರೀ ದುರ್ಗಾ ಮಕ್ಕಳ ಮೇಳದ ಅಧ್ಯಕ್ಷ ಶ್ರಿಹರಿನಾರಾಯಣದಾಸ ಆಸ್ರಣ್ಣ ಪ್ರಸ್ತಾವನೆಗೈದರು.
 ಕಾರ್ಯದರ್ಶಿ ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಮೂರು ದಿನಗಳ
ಪರ್ಯಂತ ಕರಾವಳಿಯ ೧೫ ಮಕ್ಕಳ ತೆಂಕುತಿಟ್ಟು ಯಕ್ಷಗಾನ ತಂಡಗಳು
 ಪ್ರದರ್ಶನ ನೀಡಲಿವೆ. ತಾ.೯ರ ಭಾನುವಾರ ಸಂಜೆ ಸಮಾರೋಪ,
ಕಲಾವಿದರ ಸಂಮಾನ ನಡೆಯಲಿವೆ.