Tuesday, November 26, 2013
Sunday, November 24, 2013
Friday, November 8, 2013
ಕಟೀಲು ಆರನೆಯ ಮೇಳ ಉದ್ಘಾಟನೆ
ದೇವೀ ಭಕ್ತಿ, ಕಲಾ ಪ್ರೀತಿಯಿಂದ ಸಂಸ್ಕೃತಿಯ ಉಳಿವು-ಪೇಜಾವರ ಶ್ರೀ
ಕಟೀಲು : ಯಕ್ಷಗಾನ ಪ್ರಪಂಚದ ಅದ್ಭುತವೆನಿಸಿದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಮಂಡಳಿಯ ಆರನೆಯ ಮೇಳದ ಉದ್ಘಾಟನೆ ಹಾಗೂ ಎಲ್ಲ ಮೇಳಗಳ ಈ ವರುಷದ ತಿರುಗಾಟದ ಆರಂಭ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವೈಭವದಿಂದ ನಡೆಯಿತು.
ಸಂಜೆ ಕ್ಷೇತ್ರದ ಅರ್ಚಕರಾದ ಆಸ್ರಣ್ಣ ಬಂಧುಗಳಾದ ವಾಸುದೇವ, ಅನಂತಪದ್ಮನಾಭ, ವೆಂಕಟರಮಣ, ಕಮಲಾದೇವೀ ಪ್ರಸಾದ, ಶ್ರೀಹರಿನಾರಾಯಣದಾಸ, ಮೇಳದ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಆಡಳಿತಾಧಿಕಾರಿ ಅಜಿತ್ ಕುಮಾರ ಹೆಗ್ಡೆ, ದೇಗುಲದ ತಂತ್ರಿಗಳಾದ ವೇದವ್ಯಾಸ ತಂತ್ರಿ ಸೇರಿದಂತೆ ನೂರಾರು ಮಂದಿ ಭಕ್ತರ ಉಪಸ್ಥಿತಿಯಲ್ಲಿ ದೇವರ ಸಮ್ಮುಖದಲ್ಲಿ ಲಕ್ಷ್ಮೀನಾರಾಯಣ ಆಸ್ರಣ್ಣ ಆರೂ ಮೇಳಗಳ ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ತಿರುಗಾಟಕ್ಕೆ ಚಾಲನೆ ನೀಡಿದರು. ಇದಕ್ಕಿಂತ ಮೊದಲು ಮೇಳದ ಭಾಗವತರಾದ ಪದ್ಯಾಣ ಗೋವಿಂದ ಭಟ್, ಬಲಿಪ ಪ್ರಸಾದ ಭಟ್, ಗೋಪಾಲಕೃಷ್ಣ, ಮಯ್ಯ, ಕುಬಣೂರು ಶ್ರೀಧರ ರಾವ್, ಪಟ್ಲ ಸತೀಶ ಶೆಟ್ಟಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಹಾಗೂ ಹಿಮ್ಮೇಳ ಕಲಾವಿದರಿಂದ ದೇವರ ಎದುರು ತಾಳಮದ್ದಲೆ ನಡೆಯಿತು. ಬಳಿಕ ಸರಸ್ವತೀ ಸದನದಲ್ಲಿ ಮೇಳದ ದೇವರಿಗೆ ಮುನ್ನೂರು ಕಲಾವಿದರ ಉಪಸ್ಥಿತಿಯಲ್ಲಿ ಚೌಕಿಪೂಜೆ ನಡೆಯಿತು.
ಉದ್ಘಾಟನೆ
ಪೇಜಾವರ ಮಠದ ಶ್ರೀ ವಿಶ್ವೇಶತೀಥ ಸ್ವಾಮೀಜಿ ಶ್ರೀ ದೇವೀ ಭಕ್ತಿ ಹಾಗೂ ಯಕ್ಷಗಾನದ ಮೇಲಿನ ಪ್ರೀತಿಯಿಂದ ಕಟೀಲಿನಲ್ಲಿ ಯಕ್ಷಗಾನ ಮೇಳಗಳು ಆರಕ್ಕೇರಿವೆ. ಆ ಮೂಲಕ ಸಂಸ್ಕೃತಿಯ ಔನತ್ಯವನ್ನು ಹೆಚ್ಚಿಸಿದಂತಾಗಿದೆ. ಈ ಕಾಲದಲ್ಲೂ ದೇವರ ಮೇಲಿನ ಭಕ್ತಿ ಹೆಚ್ಚಾಗಿದೆ. ಕಲೆಯ ಬಗೆಗಿನ ಪ್ರೀತಿ ಹೆಚ್ಚಾಗಿದೆ ಎಂದು ಹೇಳಬಹುದು. ಧರ್ಮ ಪ್ರಸಾರದ ಜೊತೆಗೆ ಒಳಿತನ್ನು ಸಾರುವ ಯಕ್ಷಗಾನ ಎಂದರೆ ಅದು ದೇವರಿಗೆ ಮಾಡುವ ನೃತ್ಯ, ಸಂಗೀತ ಆರಾಧನೆ. ಯಕ್ಷಗಾನ ಮೇಳಗಳಿಗೆ ಕಟೀಲು ಸೇನಾಧಿಪತಿಯಂತೆ ಇದೆ. ಅನೇಕ ಮೇಳಗಳಿಗೆ ಆಟಗಳು ಸಿಗುವುದಿಲ್ಲ. ಆದರೆ ಕಟೀಲು ಮೇಳಗಳಿಗೆ ಪುರುಸೊತ್ತೇ ಇಲ್ಲ ಎಂಬ ಸ್ಥಿತಿ.ಭಕ್ತರ ಹೃದಯ ರಂಗಸ್ಥಳದಲ್ಲಿ ಕಲೆ ಮತ್ತು ದೇವರು ಯಕ್ಷಗಾನದ ಮೂಲಕ ಸ್ಥಿರವಾಗಿ ನಿಲ್ಲುವಂತಾಗಲಿ. ಕಟೀಲಿನಲ್ಲಿ ಆಟ, ಊಟ, ಪಾಠದ ಕಾರ‍್ಯಗಳು ನಿರಂತರವಾಗಿ ನಡೆಯಲಿ ಎಂದು ಹೇಳಿದರು,
ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹಾಗೂ ಮಾಲತಿ ಮೊಯ್ಲಿ ಆರನೆಯ ಮೇಳ ಉದ್ಘಾಟಿಸಿದರು. ಡಾ.ವೀರೇಂದ್ರ ಹೆಗ್ಗಡೆ, ಸಚಿವ ವಿನಯಕುಮಾರ ಸೊರಕೆ, ಮಾಣಿಲ ಸ್ವಾಮೀಜಿ, ಸಾಂಸದ ನಳಿನ್ ಕುಮಾರ್, ಆಸ್ರಣ್ಣ ಬಂಧುಗಳು ವೇದಿಕೆಯಲ್ಲಿದ್ದರು. ಮಳೆಗಾಲದಲ್ಲೂ ಕಾಲಮಿತಿಯ ಮೇಳ ಆರಂಭವಾಗಲಿದ್ದು, ೭೦ವರ್ಷ ಮೀರಿದವರು ಆಟ ನೋಂದಾಯಿಸಿದರೆ ಕೂಡಲೇ ಅವಕಾಶ ನೀಡಲಾಗುವುದು. ೮೫೦೦ಯಕ್ಷಗಾನ ಮುಂಗಡ ನೋಂದಾವಣೆಯಾಗಿದ್ದು, ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಹತ್ತು ಮೇಳಗಳನ್ನು ಮಾಡುವ ಮನಸ್ಸು ಇದೆ ಎಂದು ಅಜಿತ್ ಕುಮಾರ ಹೆಗ್ಡೆ ಹೇಳಿದರು. ಬಾಲಕೃಷ್ಣ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.
photo by katil studio

Monday, November 4, 2013
ಕಡಂದೇಲು ಪುರುಷೋತ್ತಮ ಭಟ್ಟರಿಗಿಂದು ಗೌರವ
ಈಗಿರುವ ಯಕ್ಷಗಾನ ಕಲಾವಿದರಲ್ಲಿ ಅತ್ಯಂತ ಹಿರಿಯರೆನಿಸಿರುವ ದೇವಿ ಪಾತ್ರಧಾರಿ ಎಂದೇ ಪ್ರಸಿದ್ಧರಾದ ನೂರರ ಆಸುಪಾಸಿನಲ್ಲಿರುವ ಕಡಂದೇಲು ಪುರುಸೋತ್ತಮ ಭಟ್ಟರಿಗೆ ಇಂದು(ತಾ.೫) ಕಟೀಲು ಗೋಪಾಲಕೃಷ್ಣ ಸಭಾಭವನದಲ್ಲಿ ನಡೆಯಲಿರುವ ಶಾಂತಿಹೋಮಹವನಾಧಿಗಳ ಜೊತೆಗೆ ಗೌರವ ನಡೆಯಲಿದೆ. ಪೇಜಾವರ ಸ್ವಾಮೀಜಿ, ಸುಬ್ರಹ್ಮಣ್ಯ ಮಠಾಧೀಶರು ಭಾಗವಹಿಸಲಿದ್ದಾರೆ.
ಪುರುಷೋತ್ತಮ ಭಟ್ಟರಿಗೆ ಕರ್ನಾಟಕ ಯಕ್ಷಗಾನ ಅಕಾಡಮಿ ಪ್ರಶಸ್ತಿ, ಆಸ್ರಣ್ಣ ಪ್ರಶಸ್ತಿ, ಬೆಳುವಾಯಿಯ ಶ್ರೀ ಯಕ್ಷ ದೇವ ಪ್ರಶಸ್ತಿ, ಕಟೀಲು ದೇವಸ್ಥಾನ ಸೇರಿದಂತೆ ಹತ್ತಾರು ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ. ಓಂ ಮಾಯಲೀಲಾ, ಭಾಮಿನೀ ಷಟ್ಪದಿ ಯಲ್ಲಿ ’ಶ್ರೀ ದೇವಿ ಸ್ತುತಿ’ ಕೃತಿ ಪ್ರಕಟಿಸಿದ್ದಾರೆ. ಕಟೀಲು ದುರ್ಗೆಗೆ ಸಂಬಂಧಿಸಿದ ಭಕ್ತಿಗೀತೆ ಗಳ ಸಿಡಿ ಬಿಡುಗಡೆಯಾಗಿದೆ. ಮೂಲ್ಕಿ ಕೊರಕ್ಕೋಡು, ಕೂಡ್ಲು, ಇರಾ ಕುಂಡಾವು ಮೇಳಗಳಲ್ಲಿ ಬಳಿಕ ಕಟೀಲು ಮೇಳದಲ್ಲಿ ತಿರುಗಾಟ ಮಾಡಿದ ಪುರುಷೋತ್ತಮ ಭಟ್ಟರು ಕಿನ್ನಿಗೋಳಿಯಲ್ಲಿ ೧೯೪೩ರಲ್ಲಿ ಐದು ದಿನದ ದೇವಿ ಮಹಾತ್ಮೆ ನಡೆದಾಗ ದೇವೀ ಪಾತ್ರಧಾರಿಯಾಗಿ ಪ್ರಸಿದ್ಧಿಗೆ ಬಂದವರು. ಇವತ್ತಿಗೂ ಮೂರ‍್ನಾಲ್ಕು ಕಿಲೋಮೀಟರ್ ನಡೆದುಕೊಂಡು ಹೋಗಿ ಬರುವ ಭಟ್ಟರು ದೇವಿ, ಕೈಕೆ, ಶಕುಂತಲೆ, ಅಂಬೆ, ಮಂಡೋದರಿ, ಚಂದ್ರಮತಿ, ಸೀತೆ, ದ್ರೌಪದಿ, ಚಿತ್ರಾಂಗದೆ ಮುಂತಾದ ಪಾತ್ರಗಳಲ್ಲಿ ಪ್ರಸಿದ್ಧರಾಗಿದ್ದರು. ೧೯೭೦ ರ ಮೇ ೨೫ ರಂದು ಮೇಳಕ್ಕೆ ವಿದಾಯ ಹೇಳಿದರು. ಪೇಜಾವರ ಮಠದ ಹಿರಿಯ ಸ್ವಾಮೀಜಿ ಒಮ್ಮೆ ಆಟಕ್ಕೆ ಬಂದಿದ್ದರು. ರಾಮ ವನವಾಸಕ್ಕೆ ಹೋಗಬೇಕಾಗಿ ಬರುವ ಸಂದರ್ಭ, ಭಟ್ಟರು ಕೈಕೆಯಾಗಿ ಪಾತ್ರ ನಿರ್ವಹಿಸಿದ್ದರು. ಪ್ರಸಂಗದ ಭಾಗ ಮುಗಿದು ಹೊರಡುವ ವೇಳೆ ಸ್ವಾಮೀಜಿ ಕರೆದು ಹೇಳಿದರು. ’ಕಲ್ಲು ಸಿಗಲಿಲ್ಲ’ ಇಲ್ಲದಿದ್ದರೆ ಹೊಡೆಯುತ್ತಿದ್ದೆ ಎಂದರು. ಬಹುಶಃ ಕೈಕೆ ಪಾತ್ರ ಅಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿರಬೇಕು ಎಂದು ಖಷಿಪಟ್ಟುಕೊಳ್ಳುವ ಪುರುಷೋತ್ತಮ ಭಟ್ಟರು ರಾಮ, ವಲಲ, ಚಂಡಾಮರ್ಕ, ಬ್ರಹ್ಮಕಪಾಲದ ಬ್ರಹ್ಮ, ವಿಶ್ವಾಮಿತ್ರ, ದೂರ್ವಾಸ ಮುಂತಾದ ಪುರುಷ ಪಾತ್ರಗಳನ್ನೂ ನಿರ್ವಹಿಸಿದವರು. ಇಂತಹ ಕಡಂದೇಲು ಪುರುಷೋತ್ತಮ ಭಟ್ಟರಿಗೆ ಮುಕ್ಕಾಲು ಶತಮಾನದ ಹಿಂದಿನ ಯಕ್ಷಗಾನ ಪ್ರಪಂಚದ ಸಾಕ್ಷಿಯಾಗಿ ಇವತ್ತಿಗೂ ಅನೇಕ ಸಂಗತಿಗಳನ್ನು ಹೇಳುವ ಮಾಹಿತಿ ಕಣಜ. ಅವರಿಗಿಂದು ಕಟೀಲಿನಲ್ಲಿ ಶಾಂತಿ ಹೋಮಹವನಗಳ ಜೊತೆಗೆ ಕುಟುಂಬದ, ಅಭಿಮಾನಿಗಳ ಆತ್ಮೀಯ ಗೌರವ ಸಲ್ಲಲಿದೆ.
Friday, October 25, 2013
ಕಟೀಲಿನಲ್ಲಿ ಕಲಾಪರ್ವ
ಮಕ್ಕಳಲ್ಲಿ ಸಂಸ್ಕಾರದ ನಿರ್ಮಾಣ -ಅಜಿತ್ ಕುಮಾರ ಹೆಗ್ಡೆ
ಕಟೀಲು : ಯಕ್ಷಗಾನ ಪ್ರದರ್ಶನಗಳಿಗೆ ಹೋದರೆ ಅಲ್ಲಿ ವಯೋವೃದ್ಧರೇ ಕಾಣುತ್ತಾರೆ. ಯುವಕರ ಸಂಖ್ಯೆ ಕಡಿಮೆ ಕಾಣುತ್ತದೆ. ಮೊಬೈಲು, ಫೇಸುಬುಕ್ಕುಗಳಲ್ಲಿ ಮುಳುಗಿ ಹಾದಿತಪ್ಪುತ್ತಿರುವ ಮಕ್ಕಳಲ್ಲಿ ಯಕ್ಷಗಾನಾಸಕ್ತಿಯನ್ನು ಬೆಳೆಸಿದರೆ ಕಲಾವಿದರ ಜೊತೆಗೆ ಪ್ರೇಕ್ಷಕರ ಸಂಖ್ಯೆಯನ್ನೂ ಹೆಚ್ಚಿಸಿದಂತಾಗುತ್ತದೆ. ಅವರಲ್ಲಿ ಸಂಸ್ಕಾರವನ್ನು ನಿರ್ಮಿಸಿದಂತಾಗುತ್ತದೆ. ಕಟೀಳಿನ ದುರ್ಗಾ ಮಕ್ಕಳದ್ದು ಸೇರಿದಂತೆ ಜಿಲ್ಲೆಯಲ್ಲಿ ಅನೇಕ ಮಕ್ಕಳ ಯಕ್ಷಗಾನ ಮೇಳಗಳು ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಿರುವುದು ಸಮಾಧಾನಕರ ಎಂದು ಮಂಗಳೂರು ಮಹಾನಗರ ಪಾಳಿಕೆ ಆಯುಕ್ತ, ಕಟೀಲು ದೇಗುಲದ ಆಡಳಿತಾಧಿಕಾಇರ ಶಾನಾಡಿ ಅಜಿತ್ ಕುಮಾರ ಹೆಗ್ಡೆ ಹೇಳಿದರು.
ಅವರು ಭಾನುವಾರ ರಾತ್ರಿ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಐದನೆ ವರ್ಷದ ಕಲಾಪರ್ವದಲ್ಲಿ ಮಾತನಾಡಿದರು.
ಮುಂಬೈನ ಜ್ಯೋತಿಷಿ ಪೆರ್ಣಂಕಿಲ ಹರಿದಾಸ ಭಟ್ ಮಾತನಾಡಿ ರಾಮ ರಾವಣವನ್ನು ಕೊಂದರೆ, ಕೃಷ್ಣ ಕಂಸನನ್ನು, ದುರ್ಗಾಸುರನನ್ನು ದುರ್ಗೆ, ಮಹಿಷಾಸುರನ್ನು ಮಹಿಷಮರ್ಧಿನಿ, ರಕ್ತಬೀಜನನ್ನು ರಕ್ತೇಶ್ವರೀ, ಗಾಂಧಿಯನ್ನು ಗೋಡ್ಸೆ, ಒಸಾಮಾನನ್ನು ಒಬಾಮಾ ಹೀಗೆ ಆಯಾಯ ಅಕ್ಷರದವರೇ ಶತ್ರುಗಳಾಗಿರುವ ವಿಚಾರಗಳನ್ನು ಅಧ್ಯಯನದಿಂದ ಗಮನಿಸಬಹುದು. ಶುದ್ಧ ಕನ್ನಡವನ್ನು ಯಕ್ಷಗಾನದಿಂದ ಮಾತಾಡಬಹುದು ಎಂದು ಹೇಳಿದರು.
ಕಲಾವಿದ ಮಂಜೇಶ್ವರ ಜನಾರ್ದನ ಜೋಗಿಯವರನ್ನು ಹತ್ತು ಸಾವಿರ ರೂ.. ನಗದು ಸಹಿತ ಸಂಮಾನಿಸಲಾಯಿತು. ಯಕ್ಷಗಾನೀಯ ಶೈಲಿಯಲ್ಲಿ ಬಲಿಪ ಶಿವಶಂಕರ ಭಟ್ ಸಂಮಾನಪತ್ರ ವಾಚಿಸಿದರು.
ಪ್ರಸಂಗಕರ್ತ ಶ್ರೀಧರ ಡಿ.ಎಸ್. ಮತ್ತು ಯಕ್ಷಗಾನ ವಿಮರ್ಶಕ ಕೆ.ಎಲ್.ಕುಂಡಂತಾಯರನ್ನು ಗೌರವಿಸಲಾಯಿತು. ಇದೇ ಸಂದರ್ಭ ಯಕ್ಷಗಾನ ಶಿಕ್ಷಣ ಪಡೆದ ವಿದ್ಯಾರ್ಥೀಗಳಿಗೆ ಪ್ರಮಾಣಪತ್ರ ವಿತರಣೆ, ಯಕ್ಷಗಾನ ಪ್ರತಿಭಾ ಪುರಸ್ಕಾರ, ಗುರುವಂದನೆ ನಡೆಯಿತು.
ಸಚಿವ ಅಭಯಚಂದ್ರ ಜೈನ್, ಸೂರ್‍ಯನಾರಾಯಣ ಉಪಾಧ್ಯಾಯ, ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಅಜಿತ್ ಕುಮಾರ ಹೆಗ್ಡೆ, ಡಾ.ಪದ್ಮನಾಭ ಕಾಮತ್, ಅಜಿತ್ ಕುಮಾರ ಹೆಗ್ಡೆ, ಬಿ.ಟಿ.ಬಂಗೇರ, ತಲ್ಲೂರು ಶಿವರಾಮ ಶೆಟ್ಟಿ, ಮರವೂರು ಜಗದೀಶ ಶೆಟ್ಟಿ, ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಅಶೋಕ ಶೆಟ್ಟಿ, ಗಣೇಶ ಶೆಟ್ಟಿ, ಲೀಲಯ್ಯ ಶೆಟ್ಟಿಗಾರ, ಲೀಲಾಕ್ಷ ಕರ್ಕೇರ ಮತ್ತಿತರರಿದ್ದರು.
ಮಕ್ಕಳ ಮೇಳದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ವಾಸುದೇವ ಶೆಣೈ ಕಾರ್‍ಯಕ್ರಮ ನಿರೂಪಿಸಿದರು. ಪಶುಪತಿ ಶಾಸ್ತ್ರಿ ವಂದಿಸಿದರು. ಶ್ರೀ ದುರ್ಗ ಮಕ್ಕಳ ಮೇಳದವರಿಂದ ನೂರನೇ ಪ್ರದರ್ಶನವಾದ ರಾಮಲಕ್ಷ್ಮಣರ ಒಡ್ಡೋಲಗ ಸಹಿತವಾದ ಪಂಚವಟಿ ಪ್ರದರ್ಶನಗೊಂಡಿತು.

Monday, October 7, 2013
Subscribe to:
Posts (Atom)