ಕಟೀಲು : ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ಲಕ್ಷ್ಮೀನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿ ಆಶ್ರಯದಲ್ಲಿ ಸೋಮವಾರ ಸಂಜೆ ಕಟೀಲು ಗೋಪಾಲಕೃಷ್ಣ ಸಭಾಂಗಣದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ೨೨ಜೋಡಿಗಳು ಗ್ರಹಸ್ಥಾಶ್ರಮಕ್ಕೆ ಕಾಲಿರಿಸಿದವು.
ಲಕ್ಷ್ಮೀನಾರಾಯಣ ಆಸ್ರಣ್ಣ, ಪಿ.ಸತೀಶ್ ರಾವ್, ಜಯಂತಿ ಆಸ್ರಣ್ಣ, ಉದ್ಯಮಿ ಎ.ಜೆ.ಶೆಟ್ಟಿ, ಎ.ಕೃಷ್ಣಮೂರ್ತಿ, ಹರಿಕೃಷ್ಣ ಪುನರೂರು, ಪ್ರದೀಪ ಕಲ್ಕೂರ, ಸತೀಶ್ ಎನ್. ಬಂಗೇರ, ಸುವರ್ಣಬಾಬಾ, ವಾಸುದೇವ ರಾವ್, ಮೋಹನ ಮೆಂಡನ್, ಶ್ರೀಕಾಂತ ಉಡುಪ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು. ಸಾಹಿತಿ ಕೆ.ಎಲ್.ಕುಂಡಂತಾಯರನ್ನು ಈ ಸಂದರ್ಭ ಸಂಮಾನಿಸಲಾಯಿತು. ರಮ್ಯಾ ಆಸ್ರಣ್ಣ ಕಾರ‍್ಯಕ್ರಮ ನಿರೂಪಿಸಿದರು.
No comments:
Post a Comment