ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದ ಪ್ರೌಢಶಾಲೆಯಲ್ಲಿ ಶಾಲಾ ವಿಶೇಷಾಂಕ ಭ್ರಮರವಾಣಿಯ ಬಿಡುಗಡೆ ಬುಧವಾರ ನಡೆಯಿತು. ಇದೇ ಸಂದರ್ಭ ಸಂಜೀವನಿ ಟ್ರಸ್ಟ್‌ನ ಡಾ. ಸುರೇಶ್ ರಾವ್ ಕೊಡುಗೆಯಾಗಿ ನೀಡಿದ ಹತ್ತು ಹೊಲಿಗೆ ಯಂತ್ರಗಳು, ವಾಸುದೇವ ಆಸ್ರಣ್ಣ ಕೊಡುಗೆಯಾಗಿ ನೀಡಿದ ಕುಡಿಯುವ ನೀರಿನ ಯೋಜನೆ, ಹಳೆ ವಿದ್ಯಾರ್ಥಿ ಸಂಘ ನಡೆಸುವ ಯೋಗ ತರಗತಿಗಳನ್ನು ಉದ್ಘಾಟಿಸಲಾಯಿತು. ಡಾ. ಸುರೇಶ್ ರಾವ್, ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಹಳೆವಿದ್ಯಾರ್ಥಿ ಸಂಘದ ಶ್ರೀಹರಿನಾರಾಯಣದಾಸ ಆಸ್ರಣ್ಣ, ಶಿಕ್ಷಕ ರಕ್ಷಕ ಸಂಘದ ಬಾಬು ಶೆಟ್ಟಿ ಮರವೂರುಬೀಡು, ಮೂಲ್ಕಿ ಬಂಟರ ಸಂಘದ ಸಂತೋಷ್ ಹೆಗ್ಡೆ, ಬಾಲಕೃಷ್ಣ ಶೆಟ್ಟಿಗಾರ್, ಉಪಪ್ರಾಚಾರ್ಯ ಸುರೇಶ್ ಭಟ್, ಸಾಯಿನಾಥ ಶೆಟ್ಟಿ, ಕೆ.ವಿ.ಶೆಟ್ಟಿ, ಅಲೆಕ್ಸ್ ತಾವ್ರೋ, ಮಾಲತಿ ಮತ್ತಿತರರಿದ್ದರು.
No comments:
Post a Comment