ಕಟೀಲು : ರಾಜ್ಯದಲ್ಲಿ ಆದಾಯದಲ್ಲಿ ನಾಲ್ಕನೆಯ ಸ್ಥಾನದಲ್ಲಿರುವ ಮುಜರಾಯಿ ದೇಗುಲವಾದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ಆಡಳಿತಾಧಿಕಾರಿಯಾಗಿ ಮಂಗಳೂರಿನ ಕಮಿಷನರ್ ಹರೀಶ್ ಕುಮಾರ್ ಮಂಗಳವಾರ(ಜುಲೈ೧೦) ಅಧಿಕಾರ ಸ್ವೀಕರಿಸಿದರು. ಪುತ್ತೂರಿನಲ್ಲಿ ಸಹಾಯಕ ಆಯುಕ್ತರಾಗಿದ್ದಾಗ ಸುಬ್ರಹ್ಮಣ್ಯ ದೇಗುಲದಲ್ಲಿ ಆಡಳಿತಾಧಿಕಾರಿಯಾಗಿ ಹೆಸರು ಮಾಡಿದ್ದ ಹರೀಶ್ ಕುಮಾರ್ ಕಟೀಲಿನಲ್ಲೂ ಅಭಿವೃದ್ಧಿ ಕಾರ‍್ಯಗಳಿಗೆ ವೇಗ ಕೊಡಬಹುದು ಎಂಬ ನಿರೀಕ್ಷೆ ಸ್ಥಳೀಯರದ್ದು. ಈವರೆಗೆ ಮಂಗಳೂರು ಸಹಾಯಕ ಆಯುಕ್ತ ವೆಂಕಟೇಶ್ ಆಡಳಿತಾಧಿಕಾರಿಯಾಗಿದ್ದರು.
No comments:
Post a Comment