ಕಟೀಲು : ಮೆನ್ನಬೆಟ್ಟು ಗ್ರಾ.ಪಂ.ವ್ಯಾಪ್ತಿಯ ಕಟೀಲು ಪ್ರಥಮ ದರ್ಜೆ ಕಾಲೇಜು ಬಳಿ ಕಟೀಲ್ ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ ವತಿಯಿಂದ ನಿರ್ಮಿಸಲಾದ ಪ್ಲಾಸ್ಟಿಕ್ ಸೌಧವನ್ನು ದ.ಕ.ಜಿ.ಪಂ. ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿಯ ಈಶ್ವರ್ ಕಟೀಳ್ ಉದ್ಘಾಟಿಸಿದರು. ಗ್ರಾ.ಪಂ.ಅಧ್ಯಕ್ಷೆ ಶೈಲಾ, ಉಪಾಧ್ಯಕ್ಷ ಜನಾರ್ದನ, ಪ್ರಾಚಾರ‍್ಯ ಬಾಲಕೃಷ್ಣ ಶೆಟ್ಟಿ, ಎನ್‌ಎಸ್‌ಎಸ್‌ನ ಕೇಶವ ಎಚ್, ಪಂ.ಸದಸ್ಯರಾದ ಹರಿಶ್ಚಂದ್ರ ರಾವ್, ಶಕ್ತಿಪ್ರಸಾದ್, ರೇವತಿ, ರೋಸಿ ಪಿಂಟೊ, ರಾಮ್‌ಗೋಪಾಲ್, ಕ್ಲಬ್‌ನ ವೆಂಕಟರಮಣ ಮಯ್ಯ, ಕೇಶವ್, ಮತ್ತಿತರಿದ್ದರು.
Saturday, July 28, 2012
ಪ್ಲಾಸ್ಟಿಕ್ ಸೌಧ ಉದ್ಘಾಟನೆ
ಕಟೀಲು : ಮೆನ್ನಬೆಟ್ಟು ಗ್ರಾ.ಪಂ.ವ್ಯಾಪ್ತಿಯ ಕಟೀಲು ಪ್ರಥಮ ದರ್ಜೆ ಕಾಲೇಜು ಬಳಿ ಕಟೀಲ್ ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ ವತಿಯಿಂದ ನಿರ್ಮಿಸಲಾದ ಪ್ಲಾಸ್ಟಿಕ್ ಸೌಧವನ್ನು ದ.ಕ.ಜಿ.ಪಂ. ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿಯ ಈಶ್ವರ್ ಕಟೀಳ್ ಉದ್ಘಾಟಿಸಿದರು. ಗ್ರಾ.ಪಂ.ಅಧ್ಯಕ್ಷೆ ಶೈಲಾ, ಉಪಾಧ್ಯಕ್ಷ ಜನಾರ್ದನ, ಪ್ರಾಚಾರ‍್ಯ ಬಾಲಕೃಷ್ಣ ಶೆಟ್ಟಿ, ಎನ್‌ಎಸ್‌ಎಸ್‌ನ ಕೇಶವ ಎಚ್, ಪಂ.ಸದಸ್ಯರಾದ ಹರಿಶ್ಚಂದ್ರ ರಾವ್, ಶಕ್ತಿಪ್ರಸಾದ್, ರೇವತಿ, ರೋಸಿ ಪಿಂಟೊ, ರಾಮ್‌ಗೋಪಾಲ್, ಕ್ಲಬ್‌ನ ವೆಂಕಟರಮಣ ಮಯ್ಯ, ಕೇಶವ್, ಮತ್ತಿತರಿದ್ದರು.
Friday, July 27, 2012
ಕಟೀಲಿನಲ್ಲಿ ಮಳೆಗಾಗಿ ಪರ್ಜನ್ಯಜಪ
ಕಟೀಲು : ಮುಜರಾಯಿ ಇಲಾಖೆಯ ಸೂಚನೆಯಂತೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಶುಕ್ರವಾರ ಮಳೆಗಾಗಿ ಪ್ರಾರ್ಥಿಸಿ ೫೦೮ ಬೊಂಡಾಭಿಷೇಕ, ಪರ್ಜನ್ಯ ಜಪ ಪಠಣ, ಪೂಜೆ ನಡೆಯಿತು. ಮೊಕ್ತೇಸರ ವಾಸುದೇವ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಪ್ರಬಂಧಕ ವಿಶ್ವೇಶ್ವರ ರಾವ್ ಮತ್ತಿತರರಿದ್ದರು.
೨೦೦೧ ಹಾಗೂ ೨೦೦೨ರಲ್ಲೂ ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಇದ್ದ ಸಂದರ್ಭ ಸುಮಾ ವಸಂತ್ ಮುಜರಾಯಿ ಸಚಿವೆಯಾಗಿದ್ದಾಗ ರಾಜ್ಯಕ್ಕೆ ಬರಗಾಲ ಬಂದ ಸಂದರ್ಭ ಇದೇ ರೀತಿ ಎಲ್ಲ ಮುಜರಾಯಿ ದೇಗುಲಗಳಲ್ಲಿ ವಿಶೇಷ ಪ್ರಾರ್ಥನೆ, ಪರ್ಜನ್ಯ ಜಪ, ಯಾಗ ನಡೆಸುವಂತೆ ಆದೇಶ ನೀಡಲಾಗಿತ್ತು. ಆ ಸಂದರ್ಭ ಮೂರು ಸಾವಿರ ರೂ.ಗಿಂತ ಹೆಚ್ಚು ಖರ್ಚಿಲ್ಲದಂತೆ ಪೂಜೆ ನಡೆಸಲು ಸೂಚಿಸಲಾಗಿತ್ತು. ಈ ಬಾರಿ ಆದೇ ರೀತಿಯ ಆದೇಶ ಮಾಡಲಾಗಿದ್ದು, ಖರ್ಚಿನಲ್ಲಿ ಮಾತ್ರ ಐದು ಸಾವಿರ ರೂ.ಗಳಿಗೆ ಏರಿಸಲಾಗಿದೆ. ಈ ಖರ್ಚನ್ನು ದೇಗುಲಗಳೇ ಭರಿಸಲು ಸೂಚಿಸಲಾಗಿತ್ತು.

Tuesday, July 10, 2012
ಕಟೀಲು ಆಡಳಿತಾಧಿಕಾರಿಯಾಗಿ ಹರೀಶ್ ಕುಮಾರ್
ಕಟೀಲು : ರಾಜ್ಯದಲ್ಲಿ ಆದಾಯದಲ್ಲಿ ನಾಲ್ಕನೆಯ ಸ್ಥಾನದಲ್ಲಿರುವ ಮುಜರಾಯಿ ದೇಗುಲವಾದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ಆಡಳಿತಾಧಿಕಾರಿಯಾಗಿ ಮಂಗಳೂರಿನ ಕಮಿಷನರ್ ಹರೀಶ್ ಕುಮಾರ್ ಮಂಗಳವಾರ(ಜುಲೈ೧೦) ಅಧಿಕಾರ ಸ್ವೀಕರಿಸಿದರು. ಪುತ್ತೂರಿನಲ್ಲಿ ಸಹಾಯಕ ಆಯುಕ್ತರಾಗಿದ್ದಾಗ ಸುಬ್ರಹ್ಮಣ್ಯ ದೇಗುಲದಲ್ಲಿ ಆಡಳಿತಾಧಿಕಾರಿಯಾಗಿ ಹೆಸರು ಮಾಡಿದ್ದ ಹರೀಶ್ ಕುಮಾರ್ ಕಟೀಲಿನಲ್ಲೂ ಅಭಿವೃದ್ಧಿ ಕಾರ‍್ಯಗಳಿಗೆ ವೇಗ ಕೊಡಬಹುದು ಎಂಬ ನಿರೀಕ್ಷೆ ಸ್ಥಳೀಯರದ್ದು. ಈವರೆಗೆ ಮಂಗಳೂರು ಸಹಾಯಕ ಆಯುಕ್ತ ವೆಂಕಟೇಶ್ ಆಡಳಿತಾಧಿಕಾರಿಯಾಗಿದ್ದರು.
Subscribe to:
Posts (Atom)