Saturday, January 7, 2012
ನಿಡ್ಡೋಡಿ ಸತ್ಯನಾರಾಯಣ ಶಾಲೆ ಶತಮಾನೋತ್ಸವ
ಶಿಕ್ಷಣ ಕ್ರಾಂತಿಪುರುಷ ಸ್ಮರಣೀಯ-ಡಾ.ಹೆಗ್ಗಡೆ
ಕಟೀಲು : ಯಾವ ಸೌಲಭ್ಯಗಳೂ ಇಲ್ಲದ ತೀರಾ ಹಳ್ಳಿಯಲ್ಲಿ ನೂರು ವರುಷಗಳ ಹಿಂದೆ ಶಾಲೆಯನ್ನು ಕಟ್ಟಿ ಶಿಕ್ಷಣ ಕ್ರಾಂತಿಗೆ ಕೊಡುಗೆ ಕೊಟ್ಟ ಮಹಾನೀಯರು ಸದಾ ಸ್ಮರಣೀಯರು ಎಂದು ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಶನಿವಾರ ರಾತ್ರಿ ದಿವಂಗತ ನಾರಾಯಣ ಶೆಟ್ಟರಿಂದ ಸ್ಥಾಪಿಸಲ್ಪಟ್ಟ ನಿಡ್ಡೋಡಿ ಶ್ರೀ ಸತ್ಯನಾರಾಯಣ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಶಾಸಕ ಅಭಯಚಂದ್ರ, ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಜಗನ್ನಾಥ ಶೆಟ್ಟಿ ಮಂಡ್ಯ, ಕಲ್ಲಮುಂಡ್ಕೂರು ಗ್ರಾ.ಪಂ.ಅಧ್ಯಕ್ಷೆ ಗೀತಾ ಅಮೀನ್, ಮಂಗಳೂರು ತಾ.ಪಂ.ಅಧ್ಯಕ್ಷೆ ಭವ್ಯಾ ಗಂಗಾಧರ್, ವಿದ್ಯಾರ್ಥಿ ನಾಯಕ ಗೋಪಾಲಕೃಷ್ಣ ಪ್ರಭು, ಮುಖ್ಯ ಶಿಕ್ಷಕ ಕೆ.ಶ್ರೀನಿವಾಸ ಭಟ್ಟ, ಸತ್ಯನಾರಾಯಣ ಎಜುಕೇಶನ್ ಟ್ರಸ್ಟ್‌ನ ಯದುನಾರಾಯಣ ಶೆಟ್ಟಿ, ಸಂಚಾಲಕ ಎನ್.ದಿನಕರ ಶೆಟ್ಟಿ ಮತ್ತಿತರರಿದ್ದರು.
Subscribe to:
Post Comments (Atom)
No comments:
Post a Comment