ಕಟೀಲು : ಕನ್ನಡ ಹೋರಾಟಗಾರ, ಮಾಜಿ ಶಾಸಕ ವಾಟಾಳ್ ನಾಗರಾಜ್ ಶುಕ್ರವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ರಂಗಪೂಜೆ ಸೇವೆಯನ್ನು ಮಾಡಿದರು. ತಿಂಗಳ ಹಿಂದೆ ಕಟೀಲು ದೇಗುಲಕ್ಕೆ ಬಂದಿದ್ದಾಗ ಪೇರಣೆಗೊಂಡು ರಂಗಪೂಜೆ ಸೇವೆ ಮಾಡಿಸುವುದಾಗಿ ಹೇಳಿದ್ದ ವಾಟಾಳ್ ಶುಕ್ರವಾರ ಕ್ಷೇತ್ರಕ್ಕೆ ಆಗಮಿಸಿದ್ದರು. ಪೂಜೆಯ ಬಳಿಕ ರಥಬೀದಿಯಲ್ಲಿ ಹಾಕಿದ್ದ ರಂಗಸ್ಥಳದಲ್ಲಿ ಕಟೀಲು ಮೇಳದ ಯಕ್ಷಗಾನ ಆರಂಭವಾಗುತ್ತಿದ್ದಂತೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಬಲಿಪ ನಾರಾಯಣ ಭಾಗವತರನ್ನು ಅಭಿನಂದಿಸಿದರು ಕಪ್ಪಗಿನ ಕನ್ನಡಕ, ಟೊಪ್ಪಿ ಹಾಕಿಕೊಂಡ ವಾಟಾಳ್. ವಿವಿಧ ವೇಷಗಳನ್ನು ಹಾಕಿಕೊಂಡು, ಚಿತ್ರವಿಚಿತ್ರ ಹೋರಾಟಗಳ ಮೂಲಕ ಸುದ್ದಿಯಾಗುತ್ತಿರುವ ವಾಟಾಳ್ ನಾಗರಾಜ್, ರಂಗಸ್ಥಳದೊಳಕ್ಕೆ ಹೋಗಿ ಹಿಮ್ಮೇಳದ ಕಲಾವಿದರನ್ನು ಕೈಕುಲುಕಿದರು. ಕೆಳಗಿಳಿಯುತ್ತಿದ್ದಂತೆ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಕೂಡ ವಾಟಾಳರನ್ನು ಅಭಿಮಾನದಿಂದ ಮಾತನಾಡಿಸಿದರು.
No comments:
Post a Comment