
ಕಟೀಲಿನಲ್ಲಿ ಹರಿದು ಹೋಗುವ ನದೀ ನಂದಿನೀ ಆಸುಪಾಸಿನ ಊರುಗಳಲ್ಲಿ ಕೃಷಿಗೆ ದೊಡ್ಡ ಆಸರೆ. ಮಚ್ಚಾರು, ಎಕ್ಕಾರು, ಶಿಬರೂರು, ಅತ್ತೂರು, ಚೇಳಾಯರು, ಪಾವಂಜೆ ಹೀಗೆ ನದೀ ಹರಿದು ಹೋಗುವ ಪ್ರದೇಶಗಳಲ್ಲಿ ಗದ್ದೆಗಳಲ್ಲಿ ಹಚ್ಚಹಸುರು ಕಾಣಬಹುದು. ಕೃಷಿಯಿಂದ ಲಾಭವಿಲ್ಲ. ಗದ್ದೆ ಕೆಲಸಕ್ಕೆ ಜನ ಸಿಗುವುದಿಲ್ಲ. ಬೆಳೆದ ಬೆಳೆ ಹಾನಿಯಾದರೆ ಕೇಳುವವರಿಲ್ಲ ಇತ್ಯಾದಿ ಕಾರಣಗಳಿಂದ ಕೃಷಿ ಚಟುವಟಿಕೆಯಿಂದ ರೈತರು ದೂರವಾಗುತ್ತಿದ್ದಾರೆ. ಕೃಷಿ ಭೂಮಿಯನ್ನು ಉದ್ದಿಮೆಗಳಿಗೆ ಮಾರುತ್ತಿದ್ದಾರೆ.
ಇನ್ನೆಷ್ಟು ದಿನವೋ ಇಂತಹ ಉತ್ತುವುದು, ಬಿತ್ತುವುದು, ಕೊಯ್ಯುವುದು, ಪಾಡ್ದನ, ಓಬೇಲೆ...
No comments:
Post a Comment