ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ವಿಜಯಾ ಬ್ಯಾಂಕ್ ಕೊಡುಗೆಯಾಗಿ ನೀಡಿದ ಕುಡಿಯುವ ನೀರಿನ ವ್ಯವಸ್ಥೆಯನ್ನು ವಿಜಯಾ ಬ್ಯಾಂಕಿನ ರೀಜನಲ್ ಮೆನೇಜರ್ ಉದಯಕುಮಾರ ಶೆಟ್ಟಿ, ಪ್ರಬಂಧಕಿ ವಿನುತಾ ಪಿ.ವಿ, ದೀಪಾ ಶೆಟ್ಟಿ, ಪ್ರಭಾರ ಆಡಳಿತಾಧಿಕಾರಿ ಶಿವಕುಮಾರಯ್ಯ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಪ್ರಬಂಧಕರಾದ ವಿಜಯಕುಮಾರ್ ಉಪಸ್ಥಿತರಿದ್ದರು
Tuesday, April 28, 2015
ಕಟೀಲು ಕ್ಯಾಲೆಂಡರ್ ಬಿಡುಗಡೆ
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಮನ್ಮಥ ಸಂವತ್ಸರದ ದಿನದರ್ಶಿಕೆಯನ್ನು ಬುಧವಾರ ಸೌರಯುಗಾದಿಯಂದು ದೇಗುಲದಲ್ಲಿ ಬಿಡುಗಡೆಗೊಳಿಸಲಾಯಿತು.

ದೇಗುಲದ ವಿಶೇಷ ದಿನಗಳು, ಛಾಯಾಚಿತ್ರಗಳನ್ನು ಕ್ಯಾಲೆಂಡರ್ ಒಳಗೊಂಡಿದೆ.
Sunday, April 26, 2015
ಕಟೀಲಿಗೆ ಮುಜರಾಯಿ ಆಯುಕ್ತೆ ಪಲ್ಲವಿ ಭೇಟಿ
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಮುಜರಾಯಿ ಆಯುಕ್ತೆ ಪಲ್ಲವಿ ಅಕುರಾತಿ ಭಾನುವಾರ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಹೊಸದಾಗಿ ಆಗಿರುವ ಚಿನ್ನದ ರಥ, ಕುದ್ರು ಭ್ರಾಮರೀವನದ ಗುಡಿಗಳನ್ನು ಗಮನಿಸಿದರು. ದ್ರವ ತ್ಯಾಜ್ಯ ಘಟಕವನ್ನು ವೀಕ್ಷಿಸಿ ಮಾಹಿತಿ ಪಡೆದ ಆಯುಕ್ತೆ ಪಲ್ಲವಿ ಕಟೀಲು, ದ್ರವ ತ್ಯಾಜ್ಯ ಘಟಕ ಮಾಡಿರುವ ರಾಜ್ಯದ ಮೊದಲ ದೇವಸ್ಥಾನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ನದಿ ಹಾಗೂ ಪರಿಸರವನ್ನು ಇನ್ನಷ್ಟು ಸ್ವಚ್ಚವಾಗಿರಿಸಲು ಮುತುವರ್ಜಿ ವಹಿಸಲು ಸೂಚಿಸಿದರು. ಬಯೋಗ್ಯಾಸ್ ವ್ಯವಸ್ಥೆ ಅಳವಡಿಸಿ ಅನ್ನದಾನದ ಅಡುಗೆ ತಯಾರಿಸುವ ಬಗ್ಗೆ ಯೋಜನೆ ರೂಪಿಸಲು ಸೂಚಿಸಿದರು.
ಅನ್ನಛತ್ರ, ಭೋಜನ ವ್ಯವಸ್ಥೆಗಳನ್ನು ನೋಡಿದ ಅವರು ಅನ್ನದಾನಕ್ಕೆ ಮತ್ತು ವಿದ್ಯಾ ದಾನಕ್ಕೆ ೮೦ಜಿ ತೆರಿಗೆ ವಿನಾಯತಿಯ ನೀಡುವ ಮೊದಲ ದೇವಸ್ಥಾನ ಆಗಿರುವ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಆಡಿಟ್ ಆಗಿರುವ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ನೂತನ ಗೋಶಾಲೆ, ಸಂಸ್ಕೃತ ಶಿಕ್ಷಣದ ಬಗ್ಗೆ ಮಾಹಿತಿ ಪಡೆದರು.
ಮೊಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತಾಧಿಕಾರಿ ನಿಂಗಯ್ಯ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಮಂಗಳೂರು ಸಹಾಯಕ ಆಯುಕ್ತ ಶಿವಕುಮಾರಯ್ಯ, ಅಧಿಕಾರಿಗಳಾದ ಉಮೇಶ ಸುಧಾಕರ, ಪ್ರಬಂಧಕ ವಿಜಯ ಕುಮಾರ್ ಉಪಸ್ಥಿತರಿದ್ದರು.
ಚಿತ್ರ : ಕಟೀಲ್ ಸ್ಟುಡಿಯೋ
Saturday, April 25, 2015
ಕಟೀಲು ಪ್ರಾಥಮಿಕ ಶಾಲಾ ಶತಮಾನೋತ್ಸವ ವರ್ಷಾಚರಣೆ
ಇಂಗ್ಲಿಷ್ ಮಾಧ್ಯಮ ಶಾಲೆಯ ಆರಂಭದ ಪ್ರಸ್ತಾಪ
ಕಟೀಲು : ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ, ವಿಜೃಂಭಣೆಯಿಂದ ಆಚರಿಸುವುದೆಂದು ಗುರುವಾರ ಕಟೀಲು ಸರಸ್ವತೀ ಸದನದಲ್ಲಿ ನಡೆದ ಶಾಲೆಯ ಹಳೆ ವಿದ್ಯಾರ್ಥಿಗಳು, ಶಾಲಾಭಿಮಾನಿಗಳ ಸಭೆಯಲ್ಲಿ ನಿರ್ಣಯಿಸಲಾಯಿತು.
ಕನ್ನಡ ಮಾಧ್ಯಮದ ಶಾಲೆಗೆ ವಿದ್ಯಾರ್ಥಿಗಳ ಕೊರತೆ ಆಗದಂತೆ ಇಂಗ್ಲಿಷ್ ಸ್ಪೀಕಿಂಗ್, ಕಂಪ್ಯೂಟರ್, ಯಕ್ಷಗಾನ, ಸಂಗೀತ ನೃತ್ಯ ಮುಂತಾದ ಅನೇಕ ತರಗತಿಗಳನ್ನು ಆರಂಭಿಸಲಾಗಿದೆ. ಶತಮಾನೋತ್ಸವದ ಸವಿನೆನಪಿನಲ್ಲಿ ಹೊಸದಾಗಿ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಆರಂಭಿಸುವುದು ಅಗತ್ಯವಾಗಿದೆ ಎಂಬ ಬಗ್ಗೆ ಚರ್ಚೆ ನಡೆಯಿತು. ವರ್ಷಪೂರ್ತಿ ಕಾರ್ಯಕ್ರಮಗಳನ್ನು ಆಯೋಜಿಸುವುದು, ಶಾಲೆಯ ಸವಲತ್ತುಗಳನ್ನು ಇನ್ನಷ್ಟು ಹೆಚ್ಚಿಸುವುದರ ಬಗ್ಗೆ ಸಲಹೆಗಳು ಬಂದವು.
ದೇಗುಲವು ಈಗಾಗಲೇ ಪ್ರಾಥಮಿಕ ಹಂತದಿಂದ ಪದವಿಯವರೆಗೆ ವರ್ಷಕ್ಕೆ ನಾಲ್ಕೂವರೆ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದು, ಕಳೆದ ಆರೇಳು ವರ್ಷಗಳಲ್ಲಿ ಪ್ರಾಥಮಿಕ ಶಾಲೆಗೆ ಎರಡೂವರೆ ಕೋಟಿ ರೂ.ಗಳನ್ನು ವ್ಯಯಿಸಿಲಾಗಿದೆ ಎಂದು ಶ್ರೀಹರಿನಾರಾಯಣದಾಸ ಆಸ್ರಣ್ಣ ತಿಳಿಸಿದರು.
ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ನಿವೃತ ಉಪಪ್ರಾಚಾರ್ಯ ಉಮೇಶ ರಾವ್ ಎಕ್ಕಾರು, ರುಕ್ಮಯದಾಸ್, ಈಶ್ವರ ಕಟೀಲ್, ಮುಖ್ಯ ಶಿಕ್ಷಕಿ ವನಮಾಲಾ, ಗೋಪಾಲ್, ರಾಜೇಶ್, ಕೃಷ್ಣ, ಪದ್ಮನಾಭ ಭಟ್, ಸಂಜೀವ ಮಡಿವಾಳ, ಕೆ.ವಿ.ಶೆಟ್ಟಿ, ಲೋಕೇಶ್ ಶೆಟ್ಟಿ, ದೇವೀಪ್ರಸಾದ್ ಶೆಟ್ಟಿ, ಭಾಸ್ಕರ ದಾಸ್, ಸುಬ್ರಹ್ಮಣ್ಯ ಪ್ರಸಾದ್, ತಿಮ್ಮಪ್ಪ ಕೋಟ್ಯಾನ್, ಭುವನಾಭಿರಾಮ ಉಡುಪ, ನೀಲಯ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.
Subscribe to:
Posts (Atom)