ಭ್ರಾಮರೀ ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ನವೀಕೃತ ಅತಿಥಿ ವಸತಿಗೃಹ ’ನಂದಿನಿ’ಯನ್ನು ವಿಜಯಾ ಬ್ಯಾಂಕಿನ ಅಧ್ಯಕ್ಷ ಎಚ್.ಉಪೇಂದ್ರ ಕಾಮತ್ ಭಾನುವಾರ ಉದ್ಘಾಟಿಸಿದರು.ದೇಗುಲದ ಯಾವುದೇ ಯೋಜನೆಗಳಿಗೆ ತೊಡಗುವಾಗ ನಮ್ಮ ಬ್ಯಾಂಕನ್ನು ನೆನಪಿಸಿಕೊಳ್ಳಿ. ಖಂಡಿತವಾಗಿಯೂ ನಮ್ಮನ್ನೆಲ್ಲ ಪೊರೆವ ಭ್ರಾಮರಿಯ ಸೇವೆಗೆ ನಮ್ಮ ಬ್ಯಾಂಕು ಸಿದ್ಧವಿದೆ ಎಂದು ಉಪೇಂದ್ರ ಕಾಮತ್ ಹೇಳಿದರು.ಜಿಲ್ಲಾಧಿಕಾರಿ ಚೆನ್ನಪ್ಪ ಗೌಡ, ಕಟೀಲಿನಲ್ಲಿ ನಂದಿನಿ ನದಿಯಿಂದ ವಿದ್ಯುತ್ ಉತ್ಪಾದಿಸುವ ಯೋಜನೆಯ ಬಗ್ಗೆ ಮುತುವರ್ಜಿ ವಹಿಸಲಾಗುವುದು. ಉಳಿದ ಅಭಿವೃದ್ಧಿ ಕಾರ‍್ಯಗಳ ಬಗ್ಗೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.ವಿಜಯಾ ಬ್ಯಾಂಕ್ ಡಿಜಿಎಂ ಸುಧಾಕರ ಶೆಟ್ಟಿ, ಅರ್ಚಕರಾದ ವಾಸುದೇವ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಕಟೀಲು ವಿಜಯಾ ಬ್ಯಾಂಕಿನ ಪ್ರಬಂಧಕ ಭುವನಪ್ರಸಾದ ಹೆಗ್ಡೆ, ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ, ದೇಗುಲದ ಪ್ರಬಂಧಕ ವಿಶ್ವೇಶ್ವರ ರಾವ್ ಮತ್ತಿತರರಿದ್ದರು.ವಿಜಯಾ ಬ್ಯಾಂಕ್‌ನಿಂದ ಸುಮಾರು ೯ಲಕ್ಷ ರೂ.ನಲ್ಲಿ ಪ್ರಾಯೋಜಿಸಲ್ಪಟ್ಟ ಆರು ಕೊಠಡಿಗಳ ವಸತಿಗೃಹ ಕಟೀಲಿಗೆ ಬರುವ ವಿಶೇಷ ಅತಿಥಿಗಳ ಉಪಯೋಗಕ್ಕೆ ಸಿಗಲಿದೆ.
Sunday, June 26, 2011
Sunday, June 19, 2011
ಕಟೀಲು : ನೂತನ ಬ್ರಹ್ಮರ ಗುಡಿಗೆ ಚಾಲನೆ
ಪುರಾಣ ಪ್ರಸಿದ್ಧ ಭ್ರಾಮರೀ ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಸುಮಾರು ೮ಲಕ್ಷ ರೂ.ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳಲಿರುವ ಬ್ರಹ್ಮರ ಗುಡಿ ನಿರ್ಮಾಣಕ್ಕೆ ಶಿಲಾಮುಹೂರ್ತ, ಕಾಷ್ಟ ಮುಹೂರ್ತಗಳ ಮೂಲಕ ಚಾಲನೆ ನೀಡಲಾಯಿತು.ಶಿಬರೂರು ಹಯಗ್ರೀವ ತಂತ್ರಿ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಅತ್ತೂರುಬೈಲು ರಾಘವೇಂದ್ರ ಉಡುಪ, ಕಳತ್ತೂರು ರಾಘವೇಂದ್ರ ಭಟ್, ಸೇವಾಕರ್ತರಾದ ಗಣೇಶ ಕನ್ಸಷ್ಟ್ರಕ್ಷನ್ಸ್‌ನ ಗಣೇಶ ಬಂಗೇರ, ಪದ್ಮನಾಭ, ಕಮಲಾಕ್ಷ ಬಂಗೇರ, ಗುಡಿ ನಿರ್ಮಾಣದ ಉಸ್ತುವಾರಿ ಎಲ್ಲೂರು ವಿಷ್ಣುಮೂರ್ತಿ ಭಟ್ ಮತ್ತಿತರರಿದ್ದರು
Friday, June 3, 2011
Subscribe to:
Posts (Atom)